ಪ್ರತಿಪಕ್ಷ ನಾಯಕನಿಲ್ಲವೆಂದು ಸದನದಲ್ಲಿಯೂ ಬಿಜೆಪಿ ಕಾಲೆಳೆದ ಕಾಂಗ್ರೆಸ್

94

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ಅಧಿವೇಶನ ಶುರುವಾಗಿದೆ. ಹೀಗಿದ್ದರೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿಗೆ ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಸದನದೊಳಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು.

ಶಾಸಕರಿಗೆ ಪ್ರಶ್ನೆ ಕೇಳಲು ಅವಕಾಶ ಕೊಡಿ ಎಂದು ಸಭಾಧ್ಯಕ್ಷರಾದ ಯು.ಟಿ ಖಾದರ್ ಹೇಳಿದರು. ಪ್ರಶ್ನೋತ್ತರ ವೇಳೆ ನಂತರ ಹಾಗೂ ಶೂನ್ಯ ವೇಳೆ ನಂತರ ಮಾತನಾಡಲು ಅವಕಾಶವಿದೆ ಅಂತಾ ಹೇಳಿದರೂ ವಿಪಕ್ಷಗಳು ಕೇಳದೆ ಸದನದ ಬಾವಿಗೆ ಇಳಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಸದನದ ಬಾವಿಗೆ ಇಳಿದು ಹೋರಾಟ ನಡೆಸಿದ ಬಿಜೆಪಿ ಶಾಸಕರು ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿ ಕಾರಿದರು. ವಿಪಕ್ಷ ನಾಯಕನ ಆಯ್ಕೆ ಮಾಡಲು ಧಮ್ಮು, ತಾಕತ್ತು ಇಲ್ಲ. ಯಾರ ನಾಯಕತ್ವದಲ್ಲಿ ಪ್ರತಿಭಟನೆ ಮಾಡುತ್ತಾರೆ. ವಿಪಕ್ಷ ನಾಯಕನಿಲ್ಲದ ಬಿಜೆಪಿ ನಾಚಿಕೆ ಇಲ್ಲವೆಂದು ವಾಗ್ದಾಳಿ ನಡೆಸುವ ಮೂಲಕ ಮತ್ತಷ್ಟು ಕಾಲೆಳೆಯುವ ಕೆಲಸವಾಯ್ತು. ಹೀಗಾಗಿ ಗದ್ದಲ ಉಂಟಾಯಿತು. ಆಗ ಸ್ಪೀಕರ್ 15 ನಿಮಿಷಗಳ ಕಾಲ ಸದನ ಮುಂದೂಡಿದರು.




Leave a Reply

Your email address will not be published. Required fields are marked *

error: Content is protected !!