ಬಸ್ ಸೀಟಿಗಾಗಿ ಕೋಲಾರದಲ್ಲಿ ಮಹಿಳೆಯರ ಕಿತ್ತಾಟ

145

ಪ್ರಜಾಸ್ತ್ರ ಸುದ್ದಿ

ಕೋಲಾರ: ಸಾರಿಗೆ ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರ ನಡುವಿನ ಕಿತ್ತಾಟ ಸಧ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ಕಡೆ ನಿತ್ಯ ಜಗಳ ನಡೆಯುತ್ತಿವೆ. ಇಂದು ಕೋಲಾರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸೀಟಿಗಾಗಿ ಮಹಿಳೆಯರು ಹೊಡೆದಾಟ ನಡೆಸಿದ್ದಾರೆ.

ಮಹಿಳೆಯರ ನಡುವಿನ ಗಲಾಟೆ ನಿಲ್ಲಿಸಲು ಪೊಲೀಸರು ಲಾಠಿ ಚಾರ್ಜ್ ಮಾಡುವ ಹಂತಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಸೀಟಿಗಾಗಿ ಇಬ್ಬರು ಮಹಿಳೆಯರ ನಡುವೆ ಗಲಾಟೆ ಶುರುವಾಗಿದೆ. ಇದರ ನಡುವೆ ಮಹಿಳೆಯೊಬ್ಬಳು ತನ್ನ ಸಂಬಂಧಿಕರನ್ನು ಕರೆಸಿ ಜಗಳ ನಡೆಸಿದ್ದಾಳೆ. ಇದರ ಪರಿಣಾಮ ಪೊಲೀಸರು ಬಂದು ಲಾಠಿ ಚಾರ್ಜ್ ಮಾಡಬೇಕಾಯ್ತು ಅಂತಾ ಹೇಳಲಾಗುತ್ತಿದೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!