ಪ್ರತಿ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ: ಹಾಸಿಂಪೀರ ವಾಲಿಕಾರ

358

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ವರ್ಷ 175 ದತ್ತಿ ಗೋಷ್ಠಿಗಳನ್ನು ನಡೆಸಿದ್ದೇವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ಪಟ್ಟಣದ ಎಚ್.ಜಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗಳು ನಡೆಯುತ್ತಿವೆ. ಈ ವರ್ಷ ಪ್ರತಿ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ಏರ್ಪಡಿಸಲು ಸಿದ್ಧತೆ ಮಾಡಲಾಗುತ್ತದೆ ಅಂತಾ ಹೇಳಿದರು.

ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ.ಎಂ ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ,  ಕನ್ನಡ ಭಾಷೆಗೆ ಪುರಾತನ ಇತಿಹಾಸವಿದೆ. ಮೈಸೂರು ರಾಜಮನೆತನ ಅರಸರು ಕನ್ನಡ ಸಾಹಿತ್ಯ ಪರಿಷತ್ತುನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಶಿಕ್ಷಣ ಮತ್ತು ಸಾಹಿತ್ಯ ವಿಷಯ ಕುರಿತು ಪದ್ಮರಾಜ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಸ್ವತಂತ್ರ ಮಹಿಳಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಹೇಮಾ ಹಿರೇಮಠ, ಜಾನಪದ ಸಾಹಿತ್ಯದಲ್ಲಿ ನೀತಿ ಕುರಿತು ಎಚ್.ಜಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಪ್ರೊ.ಮುಕ್ತಾಯಕ್ಕ ಕತ್ತಿ ಉಪನ್ಯಾಸ ನೀಡಿದರು.

ಕಲ್ಲವ್ವ ರಂಗಪ್ಪ ಹೆಗ್ಗಣದೊಡ್ಡಿ ದತ್ತಿ ದಾನಿಗಳಾದ ಪ್ರೊ.ಎ.ಆರ್ ಹೆಗ್ಗಣದೊಡ್ಡಿ, ಗೌರಮ್ಮ ಸಿದ್ರಾಮಪ್ಪ ವಾಡೇದ ದತ್ತಿ ದಾನಿಗಳು ಪ್ರೊ.ರಾಮಚಂದ್ರ ವಾಡೇದ ಮಾತನಾಡಿದರು. ತಾಲೂಕ ಕಸಾಪಅಧ್ಯಕ್ಷ ಶಿವಾನಂದ ಬಡಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಕಸಾಪ ಗೌರವ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಗೌರವ ಕಾರ್ಯದರ್ಶಿ ಶಿವಕುಮಾರ ಕಲ್ಲೂರ, ಗೌರವ ಕೋಶಾಧ್ಯಕ್ಷ ಅಬ್ದುಲ್ ಖಾದರ ವಾಲಿಕಾರ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ, ಅಶೋಕ ಸುಲ್ಪಿ, ಶಾಂತಪ್ಪ ರಾಣಾಗೋಳ, ಶಿಲ್ಪಾ ಕುದರಗೊಂಡ, ಶರಣಮ್ಮ ನಾಯಕ, ಜಯಶ್ರೀ ಕುಲಕರ್ಣಿ, ಅಶ್ವೀನಿ ಪಾತ್ರೋಟಿ, ಅಂಬಿಕಾ ಪಾಟೀಲ, ರೇಣುಕಾ ಮಳಗಿ, ಅವಿನಾಶ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಪಾಟೀಲ, ಸತೀಶ ಬಸರಕೋಡ, ಭೀಮನಗೌಡ ಬಿರಾದಾರ, ಡಾ.ಅಂಬರಿಷ ಬಿರಾದಾರ, ಎಫ್.ಎ ಹಾಲಪ್ಪನವರ, ಎಸ್.ಎ ಪಾಟೀಲ, ಎಂ.ಎನ್ ಅಜ್ಜಪ್ಪ, ಎ.ಆರ್‌ ಸಿಂದಗೀಕರ, ಶಾಂತು ಬಿರಾದಾರ, ಆರ್.ಬಿ ಹೊಸಮನಿ, ಡಾ.ಎಸ್.ಎಸ್ ಚವ್ವಾಣ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅನೀತಾ ಹಾರಿವಾಳ ಪ್ರಾರ್ಥಿಸಿದರು. ಶಾಂತಿಲಾಲ ಚವ್ವಾಣ ಸ್ವಾಗತಿಸಿದರು. ಪ್ರೊ.ಸಿದ್ದಲಿಂಗ ಕಿಣಗಿ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!