ಕೋರವಾರ ಹೋಬಳಿ ಘೋಷಣೆಗೆ ಮನವಿ

344

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ತಾಲೂಕು ವ್ಯಾಪ್ತಿಯ ಕೋರವಾರ ಗ್ರಾಮವನ್ನ ಹೋಬಳಿ ಎಂದು ಮಾಡಬೇಕೆಂದು ಹೇಳಿ ಗ್ರಾಮಸ್ಥರು ಉಪ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ. ದೇವರಹಿಪ್ಪರಗಿ ನೂತನ ತಾಲೂಕು ಆಗಿದೆ. ಇದರಲ್ಲಿ ಕೋರವಾರ ಗ್ರಾಮವು ದೊಡ್ಡ ಗ್ರಾಮ ಪಂಚಾಯ್ತಿ ಹೊಂದಿದೆ. ಹೀಗಾಗಿ ಇದನ್ನ ಹೋಬಳಿ ಎಂದು ಘೋಷಿಸಬೇಕು ಅಂತಾ ಮನವಿ ಸಲ್ಲಿಸಲಾಗಿದೆ.

ಕೋರವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 8 ಸರ್ಕಾರ ಮಾದರಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳು, 1 ಕನ್ನಡ ಮಾಧ್ಯಮ ಪ್ರೌಢಶಾಲೆ, 1 ಉರ್ದು ಮಾಧ್ಯಮ ಪ್ರೌಢಶಾಲೆ, 1 ಪದವಿ ಪೂರ್ವ ಕಾಲೇಜು ಹಾಗೂ 3 ಖಾಸಗಿ ಪ್ರಾಥಮಿಕ ಶಾಲೆಗಳು, 1 ಸಾರ್ವಜನಿಕ ಗ್ರಂಥಾಲಯ, 1 ಎಎಸ್ಐ ಸಹಿತ ಪೊಲೀಸ್ ಠಾಣೆ, 1 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, 8 ಅಂಗನವಾಡಿ ಕೇಂದ್ರಗಳು, 1 ಟೆಲಿಫೋನ್ ಆಫೀಸ್, 1 ಪೋಸ್ಟ್ ಆಫೀಸ್, 33 ಕೆ ವಿ ಸಾಮರ್ಥ್ಯದ ಕೆಇಬಿ ಸೆಕ್ಷನ್ ಆಫೀಸ್, ಹಾಗೂ ಬಸ್ ನಿಲ್ದಾಣ ಹೊಂದಿದೆ. ಇಲ್ಲಿಂದ ನಿತ್ಯ 10 ರಿಂದ 15 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 8 ರಿಂದ 10 ಬಸ್ಸುಗಳ ಓಡಾಟ ಮಾಡುತ್ತೇವೆ.

ಹೀಗೆ ಹೋಬಳಿಗೆ ಬೇಕಾಗಿರುವ ಶೇಕಡ 60ರಷ್ಟು ಸರ್ಕಾರಿ ಕಚೇರಿಗಳಲ್ಲಿ ಇಲ್ಲಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದ್ರಿಂದ ಕೋರವಾರವನ್ನ ಹೋಬಳಿ ಎಂದು ಘೋಷಣೆ ಮಾಡಬೇಕು ಎಂದು ತಹಶೀಲ್ದಾರ್ ಪರವಾಗಿ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.

ಈ ವೇಳೆ ಶಿವನಗೌಡ ಪಾಟೀಲ, ಮಹಾಂತಗೌಡ ಬಿರಾದಾರ, ಹುಮಾಯನ ಮೋತಿಬಾಯ್, ಅಯ್ಯಪ್ಪ ಗೌಡ ಬಿರಾದಾರ, ಮಲ್ಲಿಕಾರ್ಜುನ ಗುಂಡದ, ಶಿವಾನಂದ ಪಟ್ಟಣದ, ಪ್ರಕಾಶ್ ಐಗಳಿ, ಮಲ್ಲಿಕಾರ್ಜುನ ಸುಂಕದ, ಶ್ರೀಶೈಲ ಭಜಂತ್ರಿ, ಮಹಾಂತೇಶ ಹಡಪದ, ಶಾಂತಗೌಡ ಡವಳಗಿ, ಅಶೋಕ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ರು.




Leave a Reply

Your email address will not be published. Required fields are marked *

error: Content is protected !!