ನಿನ್ನೆ ಕೋಟಿಗೊಬ್ಬ-3 ಸಾಂಗ್ ರಿಲೀಸ್.. ಇಂದು ಡಿ ಬಾಸ್ ಫ್ಯಾನ್ಸ್ ಗರಂ

570

ಸ್ಯಾಂಡಲ್ ವುಡ್ ಕಿಚ್ಚ ಸುದೀಪ ಅಭಿನಯದ ಕೋಟಿಗೊಬ್ಬ-3 ಚಿತ್ರದ ಸಾಂಗ್ ನಿನ್ನೆ ರಿಲೀಸ್ ಆಗಿದೆ. ಆನಂದ ಆಡಿಯೋ ಈ ಹಾಡನ್ನ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಮಾಡಿದೆ. ಆದ್ರೆ, ಇದೀಗ ಡಿ ಬಾಸ್ ಅಭಿಮಾನಿಗಳು ಒಂದು ಕಾರಣಕ್ಕೆ ಗರಂ ಆಗಿದ್ದಾರೆ.

ನಿನ್ನೆ ಬೆಳಗ್ಗೆ 10 ಗಂಟೆಗೆ ರಿಲೀಸ್ ಆದ ‘ಆಕಾಶನೆ ಅಧರಿಸುವ’ ಸಾಂಗ್ 3 ಗಂಟೆ 20 ನಿಮಿಷದಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದಿದೆ. ಇದನ್ನ ಆನಂದ ಆಡಿಯೋ ದಾಖಲೆ ಎಂದು ಬರೆದಿದೆ. ಇದಕ್ಕೆ ಸಿಟ್ಟಾಗಿರುವ ನಟ ದರ್ಶನ ಫ್ಯಾನ್ಸ್, ಯಜಮಾನ ಚಿತ್ರದ ಶಿವನಂದಿ ಹಾಡು 3 ಗಂಟೆಯಲ್ಲಿ 1 ಮಿಲಿಯನ್ ವ್ಯೂ ಆಗಿದೆ. ಅದ್ಹೇಗೆ ಅದು ದಾಖಲೆ ಆಗುತ್ತೆ ಎಂದು ಕಿಡಿ ಕಾರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!