ಮೇ 3ರ ನಂತರ 3ನೇ ಹಂತದ ಲಾಕ್ ಡೌನ್!

425

ನವದೆಹಲಿ: ಪ್ರಧಾನಿ ಮೋದಿ ಇಂದು ನಡೆಸಿದ ವಿವಿಧ ರಾಜ್ಯಗಳು ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನ್ಫ್ ರೆನ್ಸ್ ನಲ್ಲಿ, ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಕೆಯ ಸುಳಿವು ನೀಡಿದ್ದಾರೆ ಅನ್ನೋದು ತಿಳಿದು ಬಂದಿದೆ. ಕೆಲ ಸಿಎಂಗಳು ಮುಂದುವರೆಸುವ ಮನವಿ ಮಾಡಿದ್ದು, ಹೀಗಾಗಿ ಮೇ 16ರ ವರೆಗೆ ಲಾಕ್ ಡೌನ್ ಮುಂದುವರೆಸುವ ಸಾಧ್ಯತೆಯಿದೆ.

ಆದ್ಯತೆ ನೋಡಿಕೊಂಡು ಹಂತ ಹಂತವಾಗಿ ನಿರ್ಬಂಧವನ್ನ ತೆರವುಗೊಳಿಸುವ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ್ದು, ಈ ಬಗ್ಗೆ ದೀರ್ಘ ಸಮಾಲೋಚನೆ ನಡೆಸಿದ್ದಾರಂತೆ. ಇನ್ನು ಕರೋನಾ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಕಾರ್ಯವೈಖರಿಯನ್ನ ಮೆಚ್ಚಿಕೊಂಡಿದ್ದು ಎಲ್ಲರನ್ನ ಶ್ಲಾಘಿಸಿದ್ದಾರೆ.

ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ತೆರವುಗೊಳಿಸುವ ಸಂಬಂಧ ನೀತಿಯನ್ನ ಸಿದ್ಧಪಡಿಸುವಂತೆ ಹೇಳಲಾಗಿದೆಯಂತೆ. ಅಂದ್ರೆ, ರೆಡ್ ಝೋನ್ ಏರಿಯಾಗಳಲ್ಲಿ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆಯಿದೆ.

ಇನ್ಮುಂದೆ ರಾಜ್ಯ ಸರ್ಕಾರಗಳು, ಕರೋನಾ ವಿಚಾರದಲ್ಲಿ ರೆಡ್, ಆರೆಂಜ್ ಝೋನ್ ಗಳನ್ನ ಗ್ರೀನ್ ಝೋನ್ ಆಗಿ ಪರಿವರ್ತಿಸುವ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ನಾವೆಲ್ಲ ಧೈರ್ಯಶಾಲಿಗಳು, ಇದರ ಜೊತೆಗೆ ಬದಲಾವಣೆಯೊಂದಿಗೆ ಸಾಮಾನ್ಯ ಜನರೊಂದಿಗೆ ಬದಕಲು ಸಾಧ್ಯವೆಂದು ಹೇಳಿದ್ದಾರೆ.

ಪ್ರಧಾನಿ ಮೋದಿಯೊಂದಿಗಿನ ವಿಡಿಯೋ ಸಂವಾದದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗವಹಿಸಿದ್ರು. ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ ಸೇರಿದಂತೆ ಹಲವರು ಸಾಥ್ ನೀಡಿದ್ರು.




Leave a Reply

Your email address will not be published. Required fields are marked *

error: Content is protected !!