ಅಂಗಡಿ ಮುಂದೆ ಕುಳಿತವರಿಗೆ ಗುದ್ದಿದ ಲಾರಿ: ಇಬ್ಬರ ಸಾವು

240

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೋಳಿ ಅಂಗಡಿ ಮುಂದೆ ಕುಳಿತಿದ್ದ ಇಬ್ಬರ ಮೇಲೆ ಲಾರಿಯೊಂದು ಹಾಯ್ದಿದೆ. ಇದರ ಪರಿಣಾಮ ಇಬ್ಬರೂ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ನಡೆದಿದೆ.

ಎನ್.ಕೋಡಿಹಳ್ಳಿ ಗ್ರಾಮದ ಲೋಕೇಶ್(44) ಹಾಗೂ ಕೀಳಘಟ್ಟ ಗ್ರಾಮದ ಗಿರೀಶ್ ಶೆಟ್ಟಿ(50) ಮೃತ ದುರ್ದೈವಿಗಳು. ಕೋಳಿ ಅಂಗಡಿ ಮಾಲೀಕ ನಿಂಗೇಗೌಡನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!