ಇಂದಿನಿಂದ ಮೇ 6ರ ತನಕ ‘ಮನೆ ಮತದಾನ’

141

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಭರ್ಜರಿಯಾಗಿದೆ. ಮತದಾನದ ದಿನ ಹತ್ತಿರ ಬರುತ್ತಿದ್ದು, ಅಭ್ಯರ್ಥಿಗಳು ಪೈಪೋಟಿಯಿಂದ ಪ್ರಚಾರ ನಡೆಸಿದ್ದಾರೆ. ಇನ್ನು ಇದೆ ಮೊದಲ ಬಾರಿಗೆ ಚುನಾವಣಾ ಆಯೋಗ ‘ಮನೆ ಮತ’ ಜಾರಿಗೆ ತಂದಿದೆ.

ಮನೆ ಮತ ಅಂದರೆ ಮನೆಯಿಂದಲೇ ಮತದಾನ ಮಾಡುವುದು. ಆದರೆ, ಇದು 80 ವರ್ಷ ಹಾಗೂ ವಿಕಲಚೇತನರಿಗೆ ಮಾತ್ರ ಅನ್ವಯವಾಗಲಿದೆ. ಮನೆ ಮನೆಗೆ ಸಿಬ್ಬಂದಿ ಬಂದು 80 ವರ್ಷ ದಾಟಿದವರು, ವಿಕಲಚೇತನರು ಯಾರಾದರೂ ಇದ್ದರೆ ಅವರು ವೋಟರ್ ಐಡಿ ತೋರಿಸಿ ಮತದಾನ ಮಾಡಬಹುದು.

ಏಪ್ರಿಲ್ 29ರಿಂದ ಮೇ 6ರ ತನಕ ಮನೆ ಮತ ನಡೆಯಲಿದೆ. ರಾಜ್ಯದಲ್ಲಿ 80,250 ಮತದಾರರು 80 ವರ್ಷ ದಾಟಿದವರಿದ್ದಾರೆ. 19,279 ಮತದಾರರು ವಿಕಲಚೇತನರಿದ್ದಾರೆ. ಇವರಿಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!