ಮನೆ ಮತ: ಸಿಂದಗಿಯಲ್ಲಿ ಮೊದಲ ದಿನ ಮತದಾನ ಎಷ್ಟು?

119

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮನೆ ಮತ ಅನ್ನೋ ವ್ಯವಸ್ಥೆಯನ್ನು ಮಾಡಲಾಗಿದೆ. 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರಿಗಾಗಿ ಮನೆ ಮತ ಏಪ್ರಿಲ್ 29ರಿಂದ ಶುರುವಾಗಿದ್ದು, ಮೇ 6ರ ತನಕ ನಡೆಯಲಿದೆ. ಸಿಂದಗಿಯಲ್ಲಿ ಮೊದಲ ದಿನ 402 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

80 ವರ್ಷ ಮೇಲ್ಪಟ್ಟವರಲ್ಲಿ 338 ಮತದಾರರು ವೋಟ್ ಮಾಡಿದ್ದರೆ, ವಿಕಲಚೇತನರಲ್ಲಿ 64 ಮಂದಿ ಮತ ಹಾಕಿದ್ದಾರೆ. ಒಟ್ಟು 18 ರೋಟ್ ಗಳನ್ನು ಮಾಡಿದ್ದು, ರೋಟ್ ನಂಬರ್ 4ರಲ್ಲಿ 31 ಮತದಾರರಿದ್ದು, ಇದು ಶೇಕಡ 100ರಷ್ಟು ಯಶಸ್ವಿಯಾಗಿದೆ.

ಮನೆ ಮತ ಕಾರ್ಯದಲ್ಲಿ 18 ಪಿಆರ್, 19 ಒಪಿಆರ್, ಒಬ್ಬರು ಪೊಲೀಸ್, ಒಬ್ಬರು ವಿಡಿಯೋ ಗ್ರಾಫರ್ ಭಾಗಿಯಾಗಿದ್ದಾರೆ. ಮೊದಲೇ ಗುರುತಿಸಿರುವ ರೋಟ್ ಪ್ರಕಾರ ಮೇ 6ರ ತನಕ ಕೆಲಸ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!