ಮಾರುಕಟ್ಟೆಗೆ ಬಂದ ಹಣ್ಣುಗಳ ರಾಜ

384

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಬೇಸಿಗೆ ಕಾಲದಲ್ಲಿ ಎಲ್ಲರ ಅಚ್ಚುಮೆಚ್ಚಿನ ಅಡುಗೆ ಅಂದರೆ ಮಾವಿನ ಹಣ್ಣಿನ ಶಿಕರಣಿ ಹಾಗೂ ಚಪಾತಿ. ಮಾವಿನ ಹಣ್ಣಿನ ಸೀಸನ್ ಮುಗಿಯುವರೆಗೂ ಶಿಕರಣಿ ಮಾಡುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಸ್ವಲ್ಪ ತಡವಾಗಿ ಮಾವಿನಹಣ್ಣು ಮಾರುಕಟ್ಟೆಗೆ ಬಂದಿದೆ.

ಪಟ್ಟಣದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಹಣ್ಣುಗಳು ಕಾಣಿಸುತ್ತಿವೆ. ಅವುಗಳ ಖರೀದಿ ಸಹ ಜೋರಾಗಿದೆ. ಮೊದಲು ಡಜನ್ ಗಟ್ಟಲೇ ಹಣ್ಣುಗಳನ್ನು ನೀಡುತ್ತಿದ್ದರು. ಈಗ ಕೆಜಿ ಹಂತಕ್ಕೆ ಬಂದಿದ್ದು, ಒಂದು ಕೆಜಿ ಮಾವಿನ ಹಣ್ಣಿಗೆ 120 ರೂಪಾಯಿ ಹೇಳಲಾಗುತ್ತಿದೆ. ಕೊಲ್ಲಾಪುರಿ, ಆಪೂಸ್, ಕಲ್ಮಿ ಸೇರಿದಂತೆ ಗೋಯಾ ಮಾವಿನ ಹಣ್ಣುಗಳ ಭರಾಟೆ ಜೋರಾಗಿದೆ.




Leave a Reply

Your email address will not be published. Required fields are marked *

error: Content is protected !!