ಮಣಿಪುರ ಘಟನೆ ಖಂಡಿಸಿ ಪ್ರತಿಭಟನೆ

370

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಣಿಪುರದಲ್ಲಿ ನಡೆದ ಬುಡಕಟ್ಟು ಮಹಿಳೆಯರಿಬ್ಬರ ಮೇಲೆ ಸಾಮೂಹಿ ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆ ಖಂಡಿಸಿ ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮಹಿಳಾ ಜಾಗರಣಾ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾತೋಶ್ರೀ ಮಹಿಳಾ ವಿವಿದೂದ್ದೇಶ ಸಹಕಾರಿ ಸಂಘ, ಸಂಗಮ ಸಂಸ್ಥೆ, ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ, ಸಾಧನಾ ಗ್ರಾಮೀಣ ಅಭಿವೃದ್ಧಿ, ನಿವೇದಿತಾ ಯುವತಿ ಮಂಡಳಿ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಣಿಪುರದಲ್ಲಿ ಮಹಿಳೆಯರ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸಿದವರನ್ನು ಗಲ್ಲಿಗೆ ಏರಿಸಬೇಕು. ಈ ರೀತಿಯ ದೇಶದಲ್ಲಿ ಮತ್ತೊಂದು ಘಟನೆ ನಡೆಯದಂತೆ ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಿದೆ. ಇಲ್ಲದೆ ಹೋದರೆ ಹಳ್ಳಿಯಿಂದ ದಿಲ್ಲಿಯ ತನಕ ಅತ್ಯಾಚಾರ, ದೌರ್ಜನ್ಯ, ಕಿರುಕುಳ ಘಟನೆಗಳು ಪದೆಪದೆ ನಡೆಯುತ್ತವೆ. ಹೀಗಾಗಿ ಅತ್ಯಾಚಾರ ಕೃತ್ಯವೆಸಗುವವರಿಗೆ ಅತ್ಯಂತ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಯಿತು. ನಂತರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ, ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಶೈಲಜಾ ಸ್ಥಾವರಮಠ, ಸುನಂದಾ ಯಂಪೂರೆ, ಅನಸೂಯ ಪಾರಗೊಂಡ, ಮಹಾನಂದ ಬಮ್ಮಣ್ಣಿ, ಸಬಿಯಾಬೇಗಂ ಮರ್ತೂರ, ಶರಣಮ್ಮ ನಾಯಕ, ಶಶಿಕಲಾ ಅಂಗಡಿ, ಶ್ಯಾಮಲಾ ಮಂದೇವಾಲಿ, ನಿವೇದಿತಾ ಕಿರಣ, ಅಪೂರ್ಣ ಸ್ಥಾವರಮಠ, ನೀಲಮ್ಮ ಅಗಸರ, ಸುಭದ್ರಾ, ಮಾದೇವಿ ಅಂಬಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!