ಕನ್ನಡಿಗನ ದ್ವಿಶತಕ ಸಂಭ್ರಮ

363

ವಿಶಾಖಪಟ್ಟಣಂ: ಕನ್ನಡ ನೆಲದ ಯುವ ಕ್ರಿಕೆಟಿಗ ಮಯಾಂಕ ಅಗರ್ವಾಲ್ ಭರ್ಜರಿಯಾಗಿ ದ್ವಿಶತಕ ದಾಖಲಿಸಿದ್ದಾನೆ. ದಕ್ಷಿಣ ಆಫ್ರಿಕ್ ವಿರುದ್ಧ ಈ ಸಾಧನೆ ಮಾಡುವ ಮೂಲಕ ಟೆಸ್ಟ್ ನಲ್ಲಿ ಮೊದಲ ದ್ವಿಶತಕ ದಾಖಲಿಸಿದ.

6 ಸಿಕ್ಸರ್, 23 ಬೌಂಡರಿ ಮೂಲಕ ಭರ್ಜರಿಯಾಗಿ 215 ರನ್ ಬಾರಿಸುವ ಮೂಲಕ ಮೊದಲ ಡಬಲ್ ಸೆಂಚುರಿ ದಾಖಲಿಸಿದ. 4 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ 8 ಇನ್ನಿಂಗ್ಸ್ ಆಡಿರುವ ಮಯಾಂಕ 4 ಅರ್ಧ ಶತಕ ಎರಡು ಶತಕ ಸಿಡಿಸುವ ಮೂಲಕ ಫಾರ್ಮ್ ನಲ್ಲಿದ್ದು, ಇದೀಗ ದ್ವಿಶತಕ ಇವನ ಖಾತೆಗೆ ಸೇರಿದೆ.

Image result for Mayank Agarwal
ದ್ವಿಶತಕ ದಾಖಲಿಸಿದ ಮಯಾಂಕ ಅಗರ್ವಾಲ್

ಎರಡನೇ ದಿನದ ಎರಡನೇ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 450 ರನ್ ಗಳ ಬಾರಿಸಲಾಗಿದೆ. ನಿನ್ನೆ ಶತಕ ಸಿಡಿಸಿದ್ದ ರೋಹಿತ ಶರ್ಮಾ 176, ಮಯಾಂಕ 215, ಪೂಜಾರ 6, ಕೊಹ್ಲಿ 20, ಅಂಜಿಕೆ ರಹಾನೆ 15 ರನ್ ಗಳಿಸುವ ಮೂಲಕ ಫೇಲ್ ಆದ್ರು. ಆಲ್ ರೌಂಡರ್ ರವೀಂದ್ರ ಜಡೇಜಾ 6, ಹನುಮ ವಿಹಾರಿ 8 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ.

ಕೇಶವ್ ಮಹರಾಜ್ 2, ಪಿಲಂದರ್ 1 ಮುತ್ತುಸೆಮಿ 1 ಹಾಗೂ ಡೇನ್ ಎಲ್ಗರ್ 1 ವಿಕೆಟ್ ಪಡೆಯುವ ಮೂಲಕ ಉತ್ತಮ ಬೌಲಿಂಗ್ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!