ಕೋವಿಡ್ 19: ಇದ್ಯಾವ ರೀತಿಯ ಸೀಲ್ ಡೌನ್?

354

 ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಸೋಂಕು ದೃಢಪಟ್ಟ ವ್ಯಕ್ತಿಯ ಮನೆ ಸೇರಿದಂತೆ ಮನೆಯ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನ ಸೀಲ್ ಡೌನ್ ಮಾಡಲಾಗುತ್ತೆ. ಆದ್ರೆ, ಬಿಬಿಎಂಪಿ ಮಾಡಿರುವ ಕೆಲಸಕ್ಕೆ ಇದೀಗ ಎಲ್ಲಡೆಯಿಂದ ಆಕ್ರೋಶ ವ್ಯಕ್ತವಾಗ್ತಿದೆ.

ನಗರದ ದಮ್ಮಲೂರು ಹತ್ತಿರದ ರಂಕ್ ಹೈಟ್ಸ್ ಅನ್ನೋ ಅಪಾರ್ಟ್ ಮೆಂಟ್ ನಲ್ಲಿ ಕೋವಿಡ್ 19 ದೃಢಪಟ್ಟ ಮನೆಗಳ ಬಾಗಿಲು ಮುಂದೆ, ತಗಡಿನ ಶೀಟ್ ಗಳಿಂದ ಮುಚ್ಚಲಾಗ್ತಿದೆ. ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡ್ತಿರುವ ಮನೆಗಳ ಮುಂದೆ ಹೀಗೆ ತಗಡಿನ ಶೀಟ್ ಗಳಿಂದ ಮುಚ್ಚುತ್ತಿರುವುದು, ಆಕ್ರೋಶಕ್ಕೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೋವಿಡ್ 19 ವೈರಾಣು ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಧೈರ್ಯದಿಂದ ಇರುವಂತೆ ಹೇಳಬೇಕು. ಮನೆಯಿಂದ ಆಚೆ ಬರದಂತೆ ಸೂಚನೆ ನೀಡಿ, ಪಾಲಿಸಬೇಕಾದ ನಿಯಮಗಳನ್ನ ತಿಳಿಸಬೇಕು. ಸೋಂಕು ತಗುಲಿದವರನ್ನ ನಿಗದಿತ ಆಸ್ಪತ್ರೆಗೆ ದಾಖಲಿಸಬೇಕು. ಆದ್ರೆ, ಮನೆಗೆ ಶೀಟ್ ಗಳನ್ನ ಬಡೆದು ಹೋಗ್ತಿರುವುದ್ರಿಂದ ಇತರೆ ಮನೆಯವರು ಸೋಂಕಿಗೆ ಒಳಗಾದವರ ಮನೆಯವರನ್ನ ಮತ್ತಷ್ಟು ಕೀಳಾಗಿ ನೋಡುವಂತೆ ಮಾಡ್ತಿದೆ. ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!