ಕರೋನಾಗೆ 2,118 ಕೋಟಿ ಖರ್ಚಾಗಿದೆ ಅಂದ್ರೆ ಖಜಾನೆ ಖಾಲಿಯಾಗಿದ್ದೇಗೆ?

272

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ಸಂಬಂಧ ರಾಜ್ಯ ಸರ್ಕಾರ 4,167 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ವಿವಿಧ ಇಲಾಖೆಗಳ ದಾಖಲೆ ಪ್ರಕಾರ ತಿಳಿದು ಬರುತ್ತೆ ಎಂದು ವಿಪಕ್ಷ ಕಾಂಗ್ರೆಸ್ ಹೇಳಿದೆ. ಆದ್ರೆ, ಸಚಿವರು ಖರ್ಚಾಗಿರುವುದು 2,118 ಕೋಟಿ ರೂಪಾಯಿ ಎಂತಿದ್ದಾರೆ. ಹಾಗಾದ್ರೆ, ಉಳಿದ ಹಣ ಏನಾಯ್ತು ಎಂದು ಪ್ರಶ್ನಿಸಲಾಗಿದೆ.

ಆದ್ರೆ, ಕಾಂಗ್ರೆಸ್ ನಾಯಕರು ಮಾಡ್ತಿರುವ ಆರೋಪ ಸುಳ್ಳು. ವೈದ್ಯಕೀಯ ಸಲಕರಣೆ ಖರೀದಿಗೆ 366.70 ಕೋಟಿ, ವೈದ್ಯಕೀಯ ಶಿಕ್ಷಣ 33 ಕೋಟಿ, 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 68.02 ಕೋಟಿ, ಡಿಸ್ಟ್ರಿಕ್ಟ್ ಮಿನರಲ್ ಫಂಡ್ ಗೆ 23.97 ಕೋಟಿ, ಕಾರ್ಮಿಕ ಇಲಾಖೆಗೆ 4.25 ಕೋಟಿ, ಗೃಹ ಇಲಾಖೆಗೆ 5.62 ಕೋಟಿ, ಕಾರಾಗೃಹ ಇಲಾಖಗೆ 1.05 ಕೋಟಿ, ಸಾರಿಗೆ ಇಲಾಖಗೆ 2.36 ಕೋಟಿ, ಬಿಬಿಎಂಪಿಗೆ 86 ಲಕ್ಷ, ಸಮಾಜ ಕಲ್ಯಾಣ ಇಲಾಖೆಗೆ 65 ಲಕ್ಷ ಸೇರಿದಂತೆ 506 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸೋಂಕು ಬಾಧಿತರ ಪರಿಹಾರ ಕ್ರಮಗಳಿಗೆ 1611.7 ಕೋಟಿ ಸೇರಿ 2,118 ಕೋಟಿ ಖರ್ಚಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ಅಕ್ರಮ-ಸತ್ಯದ ನಡುವಿನ ಗುದ್ದಾಟದಿಂದ ಸಾರ್ವಜನಿಕರು ಇದೀಗ ಹಲವು ಪ್ರಶ್ನೆಗಳನ್ನ ಕೇಳ್ತಿದ್ದಾರೆ. ಹಾಗಾದ್ರೆ ಸರ್ಕಾರ 2020-21ನೇ ಸಾಲಿನ ಬಜೆಟ್ ಎಷ್ಟು, ತೆರಿಗೆ ಬಂದ ಹಣವೆಷ್ಟು? ಕೋವಿಡ್ 19 ಸಿಎಂ ರಿಲೀಫ್ ಫಂಡ್ ಗೆ ಬಂದ ಹಣವೆಷ್ಟು? ಕೇಂದ್ರ ಸರ್ಕಾರದಿಂದ ಸಿಕ್ಕ ನೆರವೆಷ್ಟು ಸೇರಿದಂತೆ ಹಲವು ಪ್ರಶ್ನೆಗಳನ್ನ ಜನರು ಕೇಳ್ತಿದ್ದಾರೆ.

2020-21ನೇ ಸಾಲಿನ ಬಜೆಟ್ 2,37,893 ಕೋಟಿ ರೂಪಾಯಿ ಇದೆ. ಇದರ ತೆರಿಗೆ ಎಲ್ಲ ಸೇರಿದ್ರೆ 3 ಲಕ್ಷ ಕೋಟಿ ಅಧಿಕ ಮೊತ್ತವಾಗುತ್ತೆ. ಹೀಗಿರುವಾಗ 2,118 ಕೋಟಿ ರೂಪಾಯಿ ಖರ್ಚಾಗಿದೆ ಅಂತಿರೋ ಸರ್ಕಾರ, ಇಷ್ಟು ಬೇಗ ಬೊಕ್ಕಸ ಬರಿದಾಗಿದೆ ಎಂದು ಹೇಳ್ತಿರೋದ್ಯಾಕೆ ಎಂದು ಕೇಳಲಾಗ್ತಿದೆ.

ಇನ್ನು ಈ ಬಗ್ಗೆ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲು ಏರುವ ಎಚ್ಚರಿಕೆ ನೀಡಿದೆ. ಜನರ ಬದುಕು ಕಸಿದುಕೊಳ್ತಿರುವ ಸಮಯದಲ್ಲಿ ಅಕ್ರಮ ನಡೆದಿದ್ರೆ ಹೀನ ಕೃತ್ಯವೆಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ, ರಾಜ್ಯ ಸರ್ಕಾರಕ್ಕೆ ಏನೂ ಮಾಡಲು ಹೋಗಿ ಇನ್ನೇನೋ ಮಾಡಿದಂತಾಗಿದೆ.




Leave a Reply

Your email address will not be published. Required fields are marked *

error: Content is protected !!