ಶಿವಣ್ಣ ನಿವಾಸದಲ್ಲಿ ಚಿತ್ರರಂಗದ ಸಭೆ

317

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕೋವಿಡ್ 19 ಸಮಸ್ಯೆಯಿಂದಾಗಿ ಭಾರತೀಯ ಚಿತ್ರರಂಗ ಸಮಸ್ಯೆ ಎದುರಿಸ್ತಿದೆ. ಇದಕ್ಕೆ ಚಂದನವನ ಸಹ ಹೊರತಾಗಿಲ್ಲ. ಹೀಗಾಗಿ ಇಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಮಧ್ಯಾಹ್ನ 12.30ಕ್ಕೆ ಶಿವಣ್ಣನ ಮನೆಯಲ್ಲಿ ಸಭೆ ನಡೆಯುತ್ತಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಸೇರಿದಂತೆ ಚಿತ್ರರಂಗಕ್ಕೆ ಸಂಬಂಧಿಸಿದ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಚಿತ್ರರಂಗದ ಸಮಸ್ಯೆಗಳು ಕುರಿತು ಚರ್ಚಿಸೋಣ ಎಂದಿದ್ದಾರೆ. ಇದಕ್ಕೆ ಒಪ್ಪಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಇಲ್ಲಿ ಯಾರು ನಾಯಕತ್ವ ವಹಿಸಿಕೊಳ್ತಾರೆ ಅನ್ನೋದು ಮುಖ್ಯವಲ್ಲ. ಚಿತ್ರರಂಗಕ್ಕೆ ಆಗಬೇಕಿರುವ ಕೆಲಸಗಳು ಏನು ಅನ್ನೋದು ಮುಖ್ಯ ಎಂದಿದ್ದಾರೆ. ಕೋವಿಡ್ 19 ಲಾಕ್ ಡೌನ್ ನಿಂದಾಗಿ ಸಿನಿಮಾ ದುನಿಯಾಗೆ ಭಾರೀ ಪೆಟ್ಟು ಬಿದ್ದಿದೆ. ಲಾಕ್ ಡೌನ್ ಮುಗಿದ್ರೂ ಚಿತ್ರ ಜಗತ್ತಿನ ಮೇಲೆ ಇನ್ನೂ ಕೆಲ ಷರತ್ತುಗಳು ಇದ್ದು, ಥಿಯೇಟರ್ ಓಪನ್ ಆಗಿಲ್ಲ. ಹೀಗಾಗಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!