ಮಿನಿ ವಿಧಾನಸೌಧಕ್ಕೆ ಮರುನಾಮಕರಣ

516

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕಂದಾಯ ಇಲಾಖೆ ಹೊರಡಿಸಿದ ಸುತ್ತೋಲೆ ಪ್ರಕಾರ ಮಿನಿ ವಿಧಾನಸೌಧದ ಹೆಸರು ಬದಲಾಯಿಸಲಾಗಿದೆ. ಇನ್ಮುಂದೆ ತಾಲೂಕು ಆಡಳಿತ ಸೌಧ ಎಂದು ಕರೆಯಲಾಗಿತ್ತೆ. ಹೀಗಾಗಿ ಪಟ್ಟಣದಲ್ಲಿ ತಾಲೂಕು ಕಚೇರಿಯ ಬೋರ್ಡ್ ಬದಲಾಯಿಸಲಾಗಿದೆ.

ರಾಜ್ಯದ ಭಾಷೆ ಕನ್ನಡವಾಗಿದೆ. ಮಿನಿ ಅನ್ನೋದು ಇಂಗ್ಲಿಷ್. ಜೊತೆಗೆ ಚಿಕ್ಕದು ಅನ್ನೋ ಅರ್ಥ. ತಾಲೂಕು ಕಚೇರಿಯಲ್ಲಿ ಯಾವುದೇ ಕಾಯ್ದೆ ಕಾನೂನುಗಳು ರೂಪುಗೊಳ್ಳುವುದಿಲ್ಲ. ಹೀಗಾಗಿ ಮಿನಿ ವಿಧಾನಸೌಧ ಎಂದು ಕರೆಯಬಾರದು ಅನ್ನೋ ಚರ್ಚೆ ಬಂದಾಗ, ಕಂದಾಯ ಸಚಿವ ಆರ್.ಅಶೋಕ, ತಾಲೂಕು ಆಡಳಿತ ಸೌಧ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕಳೆದ ನವೆಂಬರ್ ನಲ್ಲಿ ಹೇಳಿದ್ದರು. ಅದರಂತೆ ಇದೀಗ ಬದಲಾಗಿದೆ.

ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆ, ತಾಲೂಕು ದಂಡಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಇದನ್ನು ಚಿಕ್ಕದು(ಮಿನಿ) ಎಂದು ಹೇಳಲು ಆಗದು ಎಂದು ಮರುನಾಮಕರಣ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!