ವಿಶ್ವ ದಾಖಲೆ ಬರೆದ ಮಿಥಾಲಿ ರಾಜ್

269

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಗೆಲವು ಸಾಧಿಸಿದೆ. ಇದ್ರಿಂದಾಗಿ 2-1 ಅಂತರದಿಂದ ಸೋಲು ಒಪ್ಪಿಕೊಂಡಿದೆ. ಈ ಪಂದ್ಯದಲ್ಲಿ 75 ರನ್ ಗಳಿಸಿದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.

ಏಕದಿನ, ಟೆಸ್ಟ್, ಟಿ-20 ಸೇರಿ ಎಲ್ಲ ಮಾದರಿಯ ಪಂದ್ಯಗಳಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ್ತಿ ಆಗಿದ್ದಾರೆ. 217 ಏಕದಿನ ಪಂದ್ಯಗಳಿಂದ 7,304 ರನ್, 11 ಟೆಸ್ಟ್ ಪಂದ್ಯಗಳಿಂದ 669, 89 ಟಿ-20 ಪಂದ್ಯಗಳಿಂದ 2,364 ರನ್ ಗಳಿಸಿದ್ದಾರೆ. ಇನ್ನು ನಾಯಕಿಯಾಗಿ 84 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನಾಯಕಿಯಾಗಿದ್ದಾರೆ.

ಇನ್ನು 3ನೇ ಏಕದಿನ ಪಂದ್ಯದ ಸ್ಕೋರ್ ನೋಡುವುದಾದ್ರೆ ಇಂಗ್ಲೆಂಡ್ ಮೊದಲ ಬ್ಯಾಟ್ ಮಾಡಿ 47 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿತ್ತು. ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ 3 ವಿಕೆಟ್ ಪಡೆದ್ರು. ಈ ಸ್ಕೋರ್ ಚೇಸ್ ಮಾಡಿದ ಭಾರತೀಯ ಟೀಂ, 46.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 220 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.




Leave a Reply

Your email address will not be published. Required fields are marked *

error: Content is protected !!