ವಿಶ್ವ ದಾಖಲೆ ಬರೆದ ಮಿಥಾಲಿ ರಾಜ್

275

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ವುಮೆನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ಮಿಥಾಲಿ ರಾಜ್ ಹೊಸ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ 10 ಸಾವಿರ ರನ್ ಪೂರೈಕೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ್ತಿಯಾಗಿದ್ದಾರೆ. ಶುಕ್ರವಾರ ಮಿಥಾಲಿ ರಾಜ್ ಈ ಸಾಧನೆ ಮಾಡಿದ್ದಾರೆ.

ಸೌಥ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡ್ತಿರುವ ನಾಯಕಿ, 3ನೇ ಪಂದ್ಯದಲ್ಲಿ 36 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. 311 ಪಂದ್ಯಗಳಲ್ಲಿ 10001 ರನ್ ಗಡಿ ದಾಟಿದರು. ಇಂಗ್ಲೆಂಡ್ ನ ಚಾರ್ಲೊಟ್ ಇಡ್ವರ್ಡ್ಸ್ 309 ಪಂದ್ಯಗಳಿಂದ 10,273 ರನ್ ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ.

 ಈ ಪಂದ್ಯದಲ್ಲಿ ಪೂನಂ ರಾವುತ್ 77, ಹರ್ ಸಿಮ್ರತ್ ಕೌರ್ 36, ದೀಪ್ತಿ ಶರ್ಮಾ, 36 ರನ್ ಗಳಿಂದಾಗಿ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ. 1-1 ಪಂದ್ಯಗಳಿಂದ ಸಮಬಲ ಸಾಧಿಸಿವೆ.




Leave a Reply

Your email address will not be published. Required fields are marked *

error: Content is protected !!