ಲೇಡಿ ಸಚಿನ್ ಮಿಥಾಲಿ ಕ್ರಿಕೆಟ್ ಗೆ ವಿದಾಯ

409

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ, ಲೇಡಿ ಸಚಿನ್ ತಂಡೂಲ್ಕರ್ ಎಂದೇ ಖ್ಯಾತಿ ಗಳಿಸಿರುವ ಮಿಥಾಲಿ ರಾಜ್, ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ 39 ವರ್ಷದ ಆಟಗಾರ್ತಿ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಳೆದ 23 ವರ್ಷಗಳಲ್ಲಿ ನನಗೆ ನೀವು ನೀಡಿದ ಬೆಂಬಲ, ಸಹಕಾರ, ಪ್ರೀತಿ, ಸ್ನೇಹ ಹಾಗೂ ಮಹಿಳಾ ತಂಡದ ನಾಯಕಿಯಾಗಿ ಮಾಡಿದ ಬಿಸಿಸಿಐ ಬಳಗಕ್ಕೆ ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

232 ಏಕದಿನದ ಪಂದ್ಯಗಳಲ್ಲಿ 7,805 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ, 64 ಅರ್ಧ ಶತಕಗಳಿವೆ. 125 ಬೆಸ್ಟ್ ಸ್ಕೋರ್ ಆಗಿದೆ. 12 ಟೆಸ್ಟ್ ಪಂದ್ಯಗಳಲ್ಲಿ 699 ರನ್ ಗಳಿಸಿದ್ದಾರೆ. 1 ಶತಕ, 4 ಅರ್ಧ ಶತಕಗಳಿವೆ. 89 ಟಿ-20 ಪಂದ್ಯಗಳಲ್ಲಿ 2,364 ರನ್ ಗಳಿಸಿದ್ದಾರೆ. ಇದರಲ್ಲಿ 17 ಅರ್ಧ ಶತಕಗಳಿವೆ. ಏಕದಿನದಲ್ಲಿ 8 ವಿಕೆಟ್ ಪಡೆದಿದ್ದಾರೆ. ರಾಜಸ್ಥಾನದ ಜೈಪುರ್ ಮೂಲದ ಮಿಥಾಲಿ ರಾಜ್, 23 ವರ್ಷಗಳ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಅವರಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!