ಜೆಡಿಎಸ್ ಅಭ್ಯರ್ಥಿಗೆ ಶಾಸಕ ಶಿವನಗೌಡ ನಾಯಕ ಜೀವ ಬೆದರಿಕೆ?

182

ಪ್ರಜಾಸ್ತ್ರ ಸುದ್ದಿ

ರಾಯಚೂರು: ದೇವದುರ್ಗದ ನಿಯೋಜಿತ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಹಾಗೂ ಅವರ ಮಗಳಿಗೆ ಬಿಜೆಪಿ ಶಾಸಕ ಶಿವನಗೌಡ ನಾಯಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಬಂಜಾರ ಸಮಾವೇಶ ಯಶಸ್ವಿಯಾದ ಹಿನ್ನೆಲೆಯಲ್ಲಿ ಶಿವನಗೌಡ ನಾಯಕ್ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ 10 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳದ ಪೊಲೀಸರ ವಿರುದ್ಧ ಎಸ್ಪಿಗೆ ದೂರು ನೀಡಲಾಗಿದೆ.

ಕರೆಮ್ಮ ನಾಯಕ್ ಹಾಗೂ ಅವರ ಮಗಳು ಗೌತಮಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಕಾರ್ಯಕರ್ತ ಶಿವಪ್ಪಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!