ಡಿಕ್ಟೇಟರ್ ಮೋದಿಯಿಂದ ಮೂರನೇ ಪ್ರಮಾದ: ತರುಣ ಗೊಗೊಯ್

375

ಗುವಾಹಟಿ: ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿರುವುದು ಪ್ರಧಾನಿ ಮೋದಿಯ 3ನೇ ಪ್ರಮಾದ ಎಂದು ಆಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ ಗೊಗೊಯ್ ಆರೋಪಿಸಿದ್ದಾರೆ. ರಾಜ್ಯಗಳ ಜೊತೆ ಚರ್ಚಿಸದೆ, ತಜ್ಞರ ಅಭಿಪ್ರಾಯ ಪಡೆಯದೆ ಏಕಾಏಕಿ ಲಾಕ್ ಡೌನ್ ಘೋಷಿಸಿದ್ದು ಮೋದಿಯ 3ನೇ ಪ್ರಮಾದ ಎಂದು ಕಿಡಿ ಕಾರಿದ್ದಾರೆ.

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕನಲ್ಲ. ಅವರೊಬ್ಬ ಸರ್ವಾಧಿಕಾರಿ ಎಂದು ಸಂದರ್ಶನವೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಾಏಕಿ ನೋಟ್ ಬ್ಯಾನ್ ಮಾಡಿರುವುದು ಮೊದಲ ಪ್ರಮಾದ. ಪ್ಲಾನಿಂಗ್ ಇಲ್ಲದೆ ಜಿಎಸ್ ಟಿ ತಂದಿದ್ದು ಎರಡನೇ ಪ್ರಮಾದ. ಯಾವುದೇ ಯೋಜನೆ, ಪ್ಲಾನ್ ಇಲ್ಲದೆ ಲಾಕ್ ಡೌನ್ ಘೋಷಿಸಿದ್ದು ಮೂರನೇ ಪ್ರಮಾದ ಎಂದಿದ್ದಾರೆ.

ಮೋದಿ ಎಲ್ಲದರಲ್ಲಿಯೂ ಎಕ್ಸ್ ಪರ್ಟ್ ಅನ್ನೋ ರೀತಿ ವರ್ತಿಸ್ತಾರೆ. ಯಾರ ಸಲಹೆ ಸೂಚನೆಗಳನ್ನ ಪಡೆಯುವುದಿಲ್ಲ. ಹೀಗಾಗಿ ಯಾರನ್ನೂ ಸಂಪರ್ಕಿಸುವುದಿಲ್ಲ. ಇದು ಸರ್ವಾಧಿಕಾರಿಯ ಪ್ರವೃತ್ತಿ ಎಂದಿದ್ದಾರೆ. 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಬಡವರ, ಮಧ್ಯಮ ವರ್ಗದವರ ಪರವಾಗಿಲ್ಲ. ಬರೀ ಪಡಿತರಧಾನ್ಯ ಕೊಟ್ಟರೆ ಸಾಲದು. ಸಾಲ ಕೊಡುವುದು 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ಆಗಿದೆ. ಇದು ದೇಶದ ಆರ್ಥಿಕತೆಗೆ ಶಕ್ತಿ ತುಂಬುವುದಿಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!