ಮಾಜಿ ಕಾರ್ಪೂರೇಟ್ ಮನೆಯಲ್ಲಿ 40 ಕೋಟಿಗೂ ಹೆಚ್ಚು ಹಣ ಪತ್ತೆ

195

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉದ್ಯಮಿಗಳು ಸೇರಿದಂತೆ ವಿವಿಧ ಗಣ್ಯ ವ್ಯಕ್ತಿಗಳ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ತಡರಾತ್ರಿವರೆಗೂ ನಡೆದಿದ್ದು, ಮಾಜಿ ಕಾರ್ಪೂರೇಟ್ ಸಹೋದರನ ಮನೆಯಲ್ಲಿ ಬರೋಬ್ಬರಿ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.

ಆರ್ ಟಿ ನಗರದ ಆತ್ಮನಂದ ಕಾಲೋನಿಯಲ್ಲಿರುವ ಫ್ಲ್ಯಾಟ್ ನಲ್ಲಿ ಇಷ್ಟೊಂದು ಮೊತ್ತ ಪತ್ತೆಯಾಗಿದೆ. ವಿಡಿಯೋ ಮೂಲಕ ಹಣ ಎಣಿಕೆ ಪ್ರಕ್ರಿಯೆ ನಡೆಸಲಾಗಿದೆ. ಮಾಜಿ ಕಾರ್ಪೂರೇಟ್ ಹಾಗೂ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿರುವವರ ಸಹೋದರನಿಗೆ ಸೇರಿದ ಫ್ಲ್ಯಾಟ್ ನಲ್ಲಿ 42 ಕೋಟಿಗೂ ಅಧಿಕ ಮೊತ್ತ ಪತ್ತೆಯಾಗಿದೆ.

ಪಂಚ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಂದ ಫಂಡಿಂಗ್ ನಡೆಸಲಾಗುತ್ತಿದೆ ಅನ್ನೋ ಅನುಮಾನ ಬಂದಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಐಟಿ ಅಧಿಕಾರಿಗಳು ರಾಜ್ಯದ ವಿವಿಧ ಕಡೆ ದಾಳಿ ನಡೆಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!