ಯಧುವೀರ ವಿರುದ್ಧ ಪ್ರತಾಪ್ ಸಿಂಹ ವ್ಯಂಗ್ಯ

127

ಪ್ರಜಾಸ್ತ್ರ ಸುದ್ದಿ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಹುತೇಕ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ತಪ್ಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಯಾಕಂದರೆ, ಸ್ವತಃ ಸಂಸದರೆ, ರಾಜವಂಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅರಮನೆಯಲ್ಲಿ ಆರಾಮಾಗಿ ಇದ್ದಂತಹ ವ್ಯಕ್ತಿ ಭಾರತೀಯ ಜನತಾ ಪಕ್ಷದ ಒಬ್ಬ ಕಾರ್ಯಕರ್ತನಾಗಿ ರೈತ ವಿರೋಧಿ, ಜನ ವಿರೋಧಿ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಕರಪತ್ರ ಹಿಡಿದುಕೊಂಡು ಪ್ಲೇಕಾರ್ಡ್ ಹಿಡಿದುಕೊಂಡು ದೊಡ್ಡ ಗಡಿಯಾರದ ಹತ್ತಿರ ಕುಳಿತು ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕಾರ್ಯಕರ್ತರ ಜೊತೆ ಕುಳಿತು ಕೋಗೋದಕ್ಕೆ ಅವರು ಸಿದ್ಧರಾಗಿದ್ದಾರೆ ಅಂದರೆ ಅವರಿಗೆ ಈ ಅರಮನೆ ವೈಭೋಗ ಬೇಕಾಗಿಲ್ಲ. ಜನರ ಜೊತೆ ಇರಬೇಕು ಅನಿಸಿದೆ ಅಂತಾ ಕುಹಕವಾಡಿದ್ದಾರೆ.

ಬಾಹುಬಲಿ ಸಿನಿಮಾದಲ್ಲಿ ಅರಮನೆಯಿಂದ ಹೊರ ಹಾಕಿದ್ಮೇಲೆ ಜನರ ಜೊತೆ ಅಮರೇಂದ್ರ ಬಾಹುಬಲಿ ಜನರ ಜೊತೆ ಬಂದಿದ್ದ. ಇವರು ಸ್ವಇಚ್ಛೆಯಿಂದ ಬಂದಿದ್ದು ಖುಷಿ. ಪಕ್ಷದ ಕಾರ್ಯಕಾರಿ ಇರುತ್ತೆ. ಅಧ್ಯಕ್ಷರು ಮೇಲೆ ಕುಳಿತಿರುತ್ತಾರೆ. ನಾವು ಕೆಳಗಡೆ ಕುಳಿತಿರುತ್ತೀವಿ. ರಾಜರು ಕೆಳಗಡೆ ಕುರಿಲಿಕ್ಕೂ ರೆಡಿ ಇದ್ದಾರೆ. ರಾಜ್ಯಾಧ್ಯಕ್ಷರು ಮೈಸೂರಿಗೆ ಬರ್ತಿರತಾರೆ. ನಾವು ಬಿಸಲಲ್ಲಿ ಬೊಕ್ಕೆ ಹಿಡ್ಕೊಂಡು ಎಟ್ರಿಯಾ ಹೋಟೆಲ್ ಹತ್ತಿರ ಕಾಯ್ತಾ ಇರ್ತಿವಿ. ಮಹಾರಾಜರು ಆ ತರ ಕಾಯಕ್ಕೂ ಸಿದ್ಧರಾಗಿದ್ದಾರೆ. ಹೀಗೆ ಹೇಳುವ ಮೂಲಕ ಚುಚ್ಚು ಮಾತುಗಳನ್ನಾಡಿದ್ದಾರೆ.

ವಿಜಯಶ್ರೀಪುರದ ಜನ ಮನೆ ಕಟ್ಟಿಕೊಂಡಿದ್ದಾರೆ. ಕೋರ್ಟ್ ಕತ್ತಿ ನೆತ್ತಿ ಮೇಲೆ ನೇತಾಡುತ್ತಿದೆ. ಇದು ನಮ್ಮ ಆಸ್ತಿ ಎಂದು ರಾಜರ ಕುಟುಂಬ ಸುಪ್ರೀಂ ಕೋರ್ಟ್ ನಿಂದ ಆದೇಶ ತೆಗೆದುಕೊಂಡು ಬಂದಿದೆ. ಸಿದ್ಧಾರ್ಥ ಲೇಔಟ್ ಜನರು ಒದ್ದಾಡುತ್ತಿದ್ದಾರೆ. ಸರ್ವೇ ನಂಬರ್ 4ರಲ್ಲಿ 1,300 ಎಕರೆ ಜಾಗದಲ್ಲಿ ಸುಮಾರು ಜನರು ಖರೀದಿ ಮಾಡಿದ್ದಾರೆ. ಸ್ವಾದಿನದಲ್ಲಿದೆ. ಅವರಿಗೂ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಅವರು ಅತಂತ್ರವಾಗಿದ್ದಾರೆ. ಮಹಾರಾಜರು ಇವರೆಲ್ಲರಿಗೂ ಜಾಗ ಕೊಟ್ಟು ಅನುಕೂಲ ಮಾಡುತ್ತಾರೆ.

ವಸ್ತುಪ್ರದೇಶನ ಮೈದಾನಕ್ಕೆ 80 ಕೋಟಿ ರೂಪಾಯಿ ದುಡ್ಡು ತಂದಿದೀನಿ. ಅದು ನಮ್ಮದು ಎಂದು ರಾಜರ ಕುಟುಂಬ ಹೇಳುತ್ತಿದೆ. ಈಗ ಅದನ್ನು ಬಳಸಿಕೊಳ್ಳಲು ರಾಜರೆ ಈಗ ಜಾಗ ಕೊಡುತ್ತಾರೆ. ಖುಷಿಯ ವಿಚಾರ. ಬೆಟ್ಟದಲ್ಲಿರುವ ದೇವಿಕೆರೆ ಅಭಿವೃದ್ಧಿಗೆ ದುಡ್ಡು ತಂದರೂ ಮಾಡಕ್ಕ ಆಗಲಿಲ್ಲ. ಅದು ತಮ್ಮದು ಅಂದ್ರು. ಈಗ ಅದು ಅಭಿವೃದ್ಧಿ ಮಾಡಲು ಅನುಕೂಲವಾಗುತ್ತೆ. ಲಲಿತ್ ಮಹಲ್ ಪ್ಯಾಲೇಸ್ ಇರಬಹುದು. ಆಡಳಿತಾತ್ಮಕ ಇನ್ಸ್ ಟ್ಯೂಟ್, ಹೆಲಿಪ್ಯಾಡ್ ಇವೆಲ್ಲ ಸರ್ಕಾರದ್ದಲ್ಲ ನಮಗೆ ಸೇರಿದ್ದು ಎಂದು ಕೋರ್ಟ್ ಆದೇಶ ತಂದಿದ್ದಾರೆ. ಅವರು ಪ್ರಜೆಗಳ ಪ್ರತಿನಿಧಿಗಳಾದ್ಮೇಲೆ ಪ್ರಜೆಗಳಿಗೆ ನೀಡಬೇಕಾಗುತ್ತೆ. ಹೀಗಾಗಿ ನಮ್ಮ ಮೈಸೂರಿಗೆ ಇದೆಲ್ಲ ಅನುಕೂಲವಾಗುತ್ತೆ ಅಂತಾ ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!