ಧೋನಿ ವಿದಾಯ.. ಯುವ್ವಿ ರೀ ಎಂಟ್ರಿ?

340

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಎಂ.ಎಸ್ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟಿನ ಎಲ್ಲ ಮಾದರಿಗೂ ನಿವೃತ್ತಿ ಘೋಷಣೆ ಮಾಡಿದ್ರು. ಅದರ ಚರ್ಚೆಯ ಬೆನ್ನಲ್ಲೇ ಈಗಾಗ್ಲೇ ನಿವೃತ್ತಿ ಘೋಷಣೆ ಮಾಡಿರುವ ಸ್ಫೋಟಕ ಬ್ಯಾಟ್ಸಮನ್ ಯುವರಾಜ ಸಿಂಗ್ ರೀ ಎಂಟ್ರಿ ಕೊಡ್ತಾರೆ ಎಂದು ಹೇಳಲಾಗ್ತಿದೆ.

ಮುಂಬರುವ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಪರ ಆಡುವಂತೆ ಪಂಜಾಬ್ ಕ್ರಿಕೆಟ್ ಸಂಸ್ಥೆ ಯುವ್ವಿಗೆ ಮನವಿ ಸಲ್ಲಿಸಿದೆ. ಆಟಗಾರ ಹಾಗೂ ಮೆಂಟರ್ ಆಗಿ ಪಂಜಾಬ್ ಟೀಂಗೆ ಸಾಥ್ ನೀಡುವಂತೆ ಪಿಸಿಎ 38 ವರ್ಷದ ಎಡಗೈ ಆಟಗಾರನಿಗೆ ಕೇಳಿಕೊಂಡಿದೆ. ಆದ್ರೆ, ಯವರಾಜ ಸಿಂಗ್ ಇದಕ್ಕೆ ಯಾವುದೆ ಉತ್ತರ ನೀಡಿಲ್ಲ. ಹೀಗಾಗಿ ಕುತೂಹಲ ಮೂಡಿಸಿದೆ.

2019ರಲ್ಲಿ ಯುವ್ವಿ ನಿವೃತ್ತಿ ಘೋಷಿಸಿದ ಬಳಿಕ ಬಿಸಿಸಿಐ ವಿದೇಶಿ ಟಿ-20 ಲೀಗ್ ನಲ್ಲಿ ಆಡಲು ಎನ್ಒಸಿ ನೀಡಿತ್ತು. ಹೀಗಾಗಿ ಕೆನಾಡದ ಟಿ-20 ಲೀಗ್ ನಲ್ಲಿ ಆಡಿದ್ರು. ಈಗ ದೇಶಿ ಟೀಂನಲ್ಲಿ ಆಡಲು ಬಿಸಿಸಿಐ ಒಪ್ಪಿಗೆ ನೀಡಬಹುದೆ ಅನ್ನೋ ಪ್ರಶ್ನೆ ಇದೆ. ಆದ್ರೆ, ಸೌರವ ಗಂಗೂಲಿ ಇದರ ಅಧ್ಯಕ್ಷ ಇರುವುದ್ರಿಂದ ಸಿಗಬಹುದು ಎನ್ನಲಾಗ್ತಿದೆ.

ಯುವರಾಜ ಸಿಂಗ್ ಭಾರತ ಪರ 304 ಒನ್ ಡೇ, 40 ಟೆಸ್ಟ್, 58 ಟಿ-20 ಪಂದ್ಯಗಳನ್ನಾಡಿದ್ದಾರೆ. 2007ರ ಟಿ-20 ವರ್ಲ್ಡ್ ಕಪ್ ಹಾಗೂ 2011ರ ವರ್ಲ್ಡ್ ಕಪ್ ಹೀರೋ ಆಗಿ ಮಿಂಚಿದವರು ಇದೆ ಯುವರಾಜ ಸಿಂಗ್. ಇದೀಗ ಧೋನಿ ವಿದಾಯದ ಬೆನ್ನಲ್ಲೇ ಯುವ್ವಿ ದೇಶಿ ತಂಡದಲ್ಲಿ ಕಾಣಿಸಿಕೊಳ್ಳುವ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!