ಎಂಟಿಬಿ, ಶಂಕರಗೆ ಟಿಕೆಟ್.. ವಿಶ್ವನಾಥಗೇನು?

357

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮಾಜಿ ಸಚಿವ ಹೆಚ್.ವಿಶ್ವನಾಥ ಪಾತ್ರ ಸಹ ಇದೆ. ಹೀಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಯ್ತು. ಆದ್ರೆ, ಸೋತರು. ಬಳಿಕ ಅವರನ್ನ ಎಂಎಲ್ ಸಿ ಮಾಡುವ ಭರವಸೆ ನೀಡಲಾಗಿತ್ತು. ಇದೀಗ ಅದೆಲ್ಲವೂ ಉಲ್ಟಾ ಹೊಡೆದಿದೆ.

7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್ ಇಬ್ಬರು, ಜೆಡಿಎಸ್ ನಿಂದ ಒಬ್ಬರು ಫೈನಲ್ ಆಗಿದ್ದಾರೆ. ನಾಲ್ವರು ಬಿಜೆಪಿ ಅಭ್ಯರ್ಥಿಗಳಲ್ಲಿ ಆರ್.ಶಂಕರ, ಎಂಟಿಬಿ ನಾಗರಾಜ, ಸುನೀಲ ವಲ್ಲ್ಯಾಪುರ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ ಸಿಂಹ ನಾಯಕ ಹೆಸರಿದೆ. ವಿಶ್ವನಾಥಗೆ ಟಿಕೆಟ್ ತಪ್ಪಿದೆ. ಈ ಬಗ್ಗೆ ಮಾತ್ನಾಡಿರುವ ಹೆಚ್.ವಿಶ್ವನಾಥ, ನನ್ಗೆ ಟಿಕೆಟ್ ತಪ್ಪಲು ಹೊರಗಿನವರು ಸಹ ಕಾರಣವಾಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಎಂದರು.

ಸಿಎಂ ಬಿಎಸ್ವೈ ನನ್ನ ಹೆಸರನ್ನ ಶಿಫಾರಸು ಮಾಡಿದ್ದಾರೆ. ಆದ್ರೆ, ಕೆಲವರು ಅವರ ಮಾತನ್ನ ತಪ್ಪಿಸುವಂತೆ ಮಾಡಿದ್ದಾರೆ. ಟಿಕೆಟ್ ಕೈತಪ್ಪಿದ್ದಕ್ಕೆ ಆಕಾಶವೇನು ಕಳಚಿಬಿದ್ದಿಲ್ಲವೆಂದು ಅಸಮಾಧಾನ ಹೊರ ಹಾಕಿದ್ರು. ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ವಿಶ್ವನಾಥ, ಪರಿಷತ್ ಕನಸು ಕಾಣ್ತಿದ್ರು. ಈಗ ಅದು ಠುಸ್ ಆಗಿದೆ. ಹೀಗಾಗಿ ಪಕ್ಷ, ಅಧಿಕಾರ ಬಿಟ್ಟು ಬಂದಿರುವ ವಿಶ್ವನಾಥಗೆ ಬಿಜೆಪಿ ಏನು ನೀಡುತ್ತೆ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!