ಕರೋನಾ ಹೋರಾಟದಲ್ಲಿ ಮಾಸ್ಕ್ ಬಳಕೆ ಅಗತ್ಯ: ಸಂಜೀವಕುಮಾರ ದಾಸರ

491

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಆಚರಿಸಲಾಯ್ತು. ಪಟ್ಟಣದ ಅಂಬಿಗೇರ ಚೌಡಯ್ಯನವರ ಸರ್ಕಲ್ ಬಳಿ ಮಾಸ್ಕ್ ದಿನಾಚರಣೆಗೆ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು ಚಾಲನೆ ನೀಡಿದ್ರು. ಬಳಿಕ ಕಾಲ್ನಡಿಗೆ ಮೂಲಕ ಕರೋನಾ ಜಾಗೃತಿ ಮೂಡಿಸಲಾಯ್ತು.

ಅಂಬಿಗೇರ ಚೌಡಯ್ಯನವರ ಸರ್ಕಲ್ ನಿಂದ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಕೇಂದ್ರ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಮೂಲಕ ತೆರಳಿ, ಮಾಸ್ಕ್ ದಿನಚಾರಣೆ ಪ್ರಯುಕ್ತ ಜಾಗೃತಿ ಮೂಡಿಸಲಾಯ್ತು. ಈ ವೇಳೆ ಮಾತ್ನಾಡಿದ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು, ಕರೋನಾ ವಿರುದ್ಧ ಹೋರಾಟ ಮಾಡಬೇಕಾದ್ರೆ ಮಾಸ್ಕ್ ಧರಿಸುವುದು ಅತೀ ಮುಖ್ಯವಾಗಿದೆ. ಇದು ಅಗತ್ಯ ಸಹ ಆಗಿದೆ. ಸಾಮಾಜಿಕ ಅಂತರ, ಸ್ಯಾನಟೈಸರ್ ಬಳಕೆ ಜೊತೆಗೆ ತಪ್ಪದೆ ಎಲ್ಲರೂ ಮಾಸ್ಕ್ ಧರಿಸುವುದ್ರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸಿಪಿಐ ಸತೀಶ ಕಾಂಬಳೆ, ತಾಲೂಕು ಪಂಚಾಯ್ತಿ ಎಒ ಸುನೀಲ, ಪುರಸಭೆ ಸದಸ್ಯರು, ಪಂಚಾಯ್ತಿ ಸದಸ್ಯರು, ರೈತರು ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!