ಕೊಳೆತ ಶವದ ಕೊಲೆಗಾರರು ಸಿಕ್ಕಿದ್ದೇಗೆ? ಮರ್ಡರ್ ಹಿಂದೆ ಹೆಣ್ಣಾ.. ಹಣಾನಾ?

441

ಪ್ರಜಾಸ್ತ್ರ ಅಪರಾಧ ಸುದ್ದಿ

ಕಲಬುರಗಿ: ನಗರದ ರಾಜಾಪುರ ಕಾಲುವೆಯ ಸೇತುವೆ ಬಳಿ ಜೂನ್ 26ರಂದು ಮೃತದೇಹವೊಂದು ಪತ್ತೆಯಾಗಿತ್ತು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ಗುರುತು ಪತ್ತೆಯಾಗಿರ್ಲಿಲ್ಲ. ಹೀಗಾಗಿ ಪೊಲೀಸರಿಗೆ ಇದು ಸವಾಲಿನ ಕೆಲಸವಾಗಿತ್ತು.

ಕೊಲೆಯಾದ ಯುವಕ

ಗುರುತೆ ಸಿಗದ ಶವದ ರಹಸ್ಯದ ಹಿಂದೆ ಹೋದ ಪೊಲೀಸರು, ನಗರದ ವಿವಿಧ ಠಾಣೆಯಲ್ಲಿ ದಾಖಲಾದ ಕಾಣೆಯಾದ ಪ್ರಕರಣಗಳನ್ನ ಪರಿಶೀಲನೆ ಮಾಡಿದ್ದಾರೆ. ಆಗ ತಾರಫೈಲ್ ನ ವಿಶಾಲ ಅನ್ನೋ ಹುಡ್ಗ ಮಿಸ್ಸಿಂಗ್ ಆಗಿರುವುದು ಗೊತ್ತಾಗಿದೆ. ಕುಟುಂಬಸ್ಥರನ್ನ ಕರೆಸಿ ಶವವನ್ನ ತೋರಿಸಿದ್ದಾರೆ. ಮೃತದೇಹ ಗುರುತು ಸಿಗದಷ್ಟು ಕೊಳೆತು ಹೋಗಿದ್ರಿಂದ, ಚಡ್ಡಿ ಹಾಗೂ ಪ್ಯಾಂಟಿನ ಮೇಲೆ ವಿಶಾಲ ಅನ್ನೋದು ಕನ್ಫರ್ಮ್ ಮಾಡಿದ್ದಾರೆ.

ಹುಡ್ಗಿಗಾಗಿ ಜಗಳ ನಡೆದಿತ್ತು!

ಕೊಲೆಯ ಬಗ್ಗೆ ತನಿಖೆ ನಡೆಸಿದ ವಿಶ್ವವಿದ್ಯಾಲಯ ಠಾಣೆ ಪೊಲೀಸರು, ಪೋಷಕರನ್ನ ಕೇಳಿದ್ದಾರೆ. ಹುಡ್ಗಿಯ ವಿಚಾರದಲ್ಲಿ ವಿಶಾಲ ಕೆಲ ಹುಡುಗರೊಂದಿಗೆ ಜಗಳ ಮಾಡಿಕೊಂಡಿದ್ದ ಅನ್ನೋದು ತಿಳಿಸಿದ್ದಾರೆ. ಈ ದಾರಿಯಲ್ಲಿ ತನಿಖೆ ನಡೆಸಿದ ಖಾಕಿ ಟೀಂಗೆ, ಕೊಲೆ ಹಿಂದಿನ ಕೈ ಇವರದಲ್ಲ ಅನ್ನೋದು ತಿಳಿದಿದೆ. ಹೀಗಾಗಿ ಅನುಮಾನ ಬಂದವರನ್ನ ಕರೆಸಿ ವಿಚಾರಣೆ ಮಾಡಿದ್ದಾರೆ. ಆಗ ಬಯಲಾಗಿದ್ದೆ ಹಣದ ವ್ಯವಹಾರ.

ಸಾಲದ ಹಣ ಕೇಳಿದಕ್ಕೆ ಹೆಣವಾದ!

ವಿಶಾಲ ತಾಯಿ ಸುನಿಲ ಅಲಿಯಾಸ್ ಸೋನು ಕಾಂಬ್ಳೆ ಎಂಬುವನಿಗೆ 3 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. ಹೀಗಾಗಿ ಅದರ ಬಡ್ಡಿ ಹಾಗೂ ಅಸಲು ಹಣ ವಸೂಲಿಗೆ ಮಗನಿಗೆ ಹೇಳಿದ್ದಾಳೆ. ಹೀಗಾಗಿ ವಿಶಾಲ, ಹಣಕ್ಕಾಗಿ ಸೋನು ಕಾಂಬ್ಳೆನನ್ನ ಕೇಳುತ್ತಲೇ ಬಂದಿದ್ದಾನೆ. ಇದ್ರಿಂದ ಬೇಸತ ಸೋನು ಕಾಂಬ್ಳೆ, ತನ್ನಿಬ್ಬರ ಸಹಚರರ ಜೊತೆ ಸೇರಿಕೊಂಡು ವಿಶಾಲನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಚರಂಡಿ ಹತ್ತಿರ ಎಸೆದು ಹೋಗಿದ್ದಾರೆ.

ಹೀಗೆ ತನಿಖೆ ವೇಳೆ ಸತ್ಯ ಒಪ್ಪಿಕೊಂಡ ಸೋನು ಕಾಂಬ್ಳೆ, ಶಿವಲಿಂಗ ಹುಲಿಮನಿ ಹಾಗೂ ರಾಜು ಗುರುಸುಣಗಿ ಎಂಬುವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!