ನಡುರಸ್ತೆಯಲ್ಲಿಯೇ ಚೆಲ್ಲಿದ ರಕ್ತ

422

ಇಂಡಿ: ಹಾಡುಹಗಲೆ ಪತ್ನಿಯನ್ನ ರೋಡ್ ಮಧ್ಯದಲ್ಲಿ ಕೊಲೆ ಮಾಡಿದ ಘಟನೆ ಇಂಡಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿ ಎದುರಿಗೆ ಈ ಭೀಕರ ಘಟನೆ ನಡೆದಿದೆ.

26 ವರ್ಷದ ಶಾಹಿದಾ ಬಾಗವಾನ್ ಕೊಲೆಯಾದ ಮಹಿಳೆ. ಈಕೆ ಪತಿ 30 ವರ್ಷದ ಖಾಜಿಸಾಬ್ ಬಾಗವಾನ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಬೈಕ್ ಮೇಲೆ ಬಂದ ಆರೋಪಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಇಂಡಿ ತಾ‌ಲೂಕಿನ ಪಡನೂರ್ ಗ್ರಾಮದ ದಂಪತಿ ಶಾಹಿದಾ ಹಾಗೂ ಖಾಜಿಸಾಬ ನಡುವೆ ನಿನ್ನೆ ಜಗಳವಾಗಿದೆ. ಇದೇ ಕಾರಣಕ್ಕೆ ಇಂದು ಗಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ಬರ್ತಿದ್ದಳು. ಈ ವೇಳೆ ಪತಿ ಬೈಕ್ ಮೇಲೆ ಬಂದು ಕೊಲೆ ಮಾಡಿದ್ದಾನೆ. ಹಾಡು ಹಗಲೆ ನಡೆದ ಕೃತ್ಯದಿಂದ ಇಂಡಿ ಪಟ್ಟಣದ ಜನ ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


TAG


Leave a Reply

Your email address will not be published. Required fields are marked *

error: Content is protected !!