ಹೋಟೆಲ್ ನಲ್ಲಿ ಯುವತಿ ನಿಗೂಢ ಸಾವು

381

ಹಾಸನ: ಹೋಟಲ್ ನಲ್ಲಿದ್ದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಹಾಸನದಲ್ಲಿಂದು ನಡೆದಿದೆ. ಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಮೃತ ಯುವತಿಯನ್ನ 23 ವರ್ಷದ ಭವಿತಾ ಅಂತಾ ಗುರುತಿಸಲಾಗಿದೆ. ಹಾಸನ ಜಿಲ್ಲೆ ಅರಕಲಗೂಡು ಮೂಲದ ಭವಿತಾ ಕಳೆದ 12 ದಿನಗಳಿಂದ ಸರಾಯು ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿಕೊಂಡು ಇದ್ದಳು. ಇಂದು ಬೆಳಗ್ಗೆ ಯುವತಿಯ ಮೃತದೇಹ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಪತ್ತೆಯಾಗಿದೆ. ಭವಿತಾ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು, ಕೈ ಮೇಲೆ ಪುನೀತ ಎಂದು ಬರೆಸಿಕೊಂಡಿದ್ದು ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಹೋಟೆಲ್ ಮೇಲಿದ್ದ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾಳೆ ಅನ್ನೋದಕ್ಕೆ ಯುವತಿ ಮೈಮೇಲೆ ಯಾವುದೇ ಗಾಯದ ಗುರುತುಗಳಲ್ಲಿ. ಹೀಗಾಗಿ ಹೋಟೆಲ್ ಸಿಸಿಟಿವಿ ಪೂಟೇಜ್ ಪಡೆದಿರುವ ಪೊಲೀಸ್ರು ಆಕೆಯ ರೂಮಿಗೆ ಯಾರಾದ್ರೂ ಬಂದಿರುವ ಬಗ್ಗೆ ವಿಚಾರಣೆ ನಡೆದಿದೆ. ಹೀಗಾಗಿ ಇದು ಕೊಲೆಯೋ ಅಥವಾ ಆತ್ಮಹತ್ಯೆವೋ ಅನ್ನೋದರ ತನಿಖೆ ನಡೆಯಬೇಕಿದೆ.




Leave a Reply

Your email address will not be published. Required fields are marked *

error: Content is protected !!