ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಮೂವಿ ಬಗ್ಗೆ ನಿಮಗೆಲ್ಲ ಗೊತ್ತಿದೆ. ತರುಣ ಸುಧೀರ ನಿರ್ದೇಶನ, ಉಮಾಪತಿ ಶ್ರೀನಿವಾಸ ನಿರ್ಮಿಸ್ತಿರುವ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಈಗಾಗ್ಲೇ ರಾಬರ್ಟ್ ಪೋಸ್ಟರ್, ಟೀಸರ್ ಡಿ ಬಾಸ್ ಅಭಿಮಾನಿಗಳಿಗೆ ಹೆಚ್ಚೆಬ್ಬಿಸಿದೆ.
ಕರೋನಾ ಹಾವಳಿಯಿಂದ ಸಿನಿಮಾ ರಿಲೀಸ್ ಗೆ ತೊಂದರೆಯಾಗಿದೆ. ಇದರ ನಡುವೆ ಈ ತ್ರಿಮೂರ್ತಿಗಳು ಮತ್ತೊಂದು ಸಿನಿಮಾಗೆ ರೆಡಿಯಾಗಿದ್ದಾರೆ. ಯೆಸ್, ನಟ ದರ್ಶನಗೆ ತರುಣ ಸುಧೀರ ಮತ್ತೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದು, ಸ್ಕ್ರಿಪ್ಟ್ ಪೂಜೆಯನ್ನ ವರಮಹಾಲಕ್ಷ್ಮಿ ಹಬ್ಬದಂದು ಮಾಡಲಾಗಿದೆ.
ಹೊಸ ಚಿತ್ರದ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಿದ್ದೇವೆ ಎಂದು ತರುಣ ಸುಧೀರ ಟ್ವೀಟ್ ಮಾಡಿದ್ದಾರೆ. ಈ ಚಿತ್ರ ಸಹ ಉಮಾಪತಿ ಶ್ರೀನಿವಾಸ ನಿರ್ಮಾಣ ಮಾಡಲಿದ್ದಾರೆ. ಹೀಗಾಗಿ ಮತ್ತಷ್ಟು ಕುತೂಹಲ ಮೂಡಿದೆ.