ಎಲ್ಲೆಡೆ ಹೊಸ ವರ್ಷದ ಸಂಭ್ರಮ.. ಇರಲಿ ಎಚ್ಚರ..

126

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಶ್ವದೆಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಇನ್ನು ರಾಜ್ಯದ ಜನತೆ ಸಹ 2023 ಅನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಭರ್ಜರಿ ಪಾರ್ಟಿ ಮಾಡುವುದರೊಂದಿಗೆ ಹೊಸ ಕ್ಯಾಲೆಂಡರ್ ಗೆ ಸ್ವಾಗತ ಕೋರಲಿದ್ದಾರೆ.

ಸಿಲಿಕಾನ್ ಸಿಟಿಯ ಸ್ಟಾರ್ ಹೋಟೆಲ್ ಗಳು, ರೆಸಾರ್ಟ್ ಗಳು, ಪ್ರಮುಖ ಏರಿಯಾಗಳಲ್ಲಿರುವ ಪಬ್, ಬಾರ್ ಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತಿ ಮಾಡಲಾಗಿದೆ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಕಲ ರೀತಿಯ ಸಿದ್ಧತೆಯನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ.

ಹೊಸ ವರ್ಷದ ಹೊಸ್ತಿಲಲ್ಲಿ ಕೋವಿಡ್ ಸೋಂಕಿನ ಭಯ ಆವರಿಸಿಕೊಂಡಿದೆ. ಹೀಗಾಗಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಜನರು ಸಹ ಎಚ್ಚರಿಕೆಯಿಂದ ಇರಬೇಕಿದೆ. ನ್ಯೂ ಇಯರ್ ಪಾರ್ಟಿ ಎಂದು ಎಲ್ಲೆ ಮೀರಿ ನಡೆದುಕೊಳ್ಳದೆ ಖುಷಿ ಖುಷಿಯಾಗಿ ಎಂಜಾಯ್ ಮಾಡಬೇಕಿದೆ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಪಾರ್ಟಿ ಎಂಜಾಯ್ ಮಾಡುವ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!