ಶಾಲಾ, ಕಾಲೇಜುಗಳಲ್ಲಿ ಹೊಸ ವರ್ಷದ ಸಂಭ್ರಮ

545

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎಲ್ಲೆಡೆ ನಿನ್ನೆ ಮಧ್ಯರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಇಂದು ತಾಲೂಕಿನ ಬಹುತೇಕ ಶಾಲಾ, ಕಾಲೇಜುಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸಲಾಗಿದೆ. ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್ ಶಾಲೆಯಲ್ಲಿ ಚಿಣ್ಣರು ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಸಂಭ್ರಮಿಸಿದರು.

ಶಿಕ್ಷಕರು ಮಕ್ಕಳಿಗೆ ಹಾಡುಗಳನ್ನು ಹೇಳಿಕೊಡುವ ಮೂಲಕ ಅವರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದರು. ಹೀಗಾಗಿ ಮಕ್ಕಳು ಹಾಡಿ, ಕುಣಿದು ನ್ಯೂ ಇಯರ್ ಆಚರಿಸಿದರು. ನಂತರ ಕೇಕ್ ಕಟ್ ಮಾಡುವ ಎಲ್ಲರಿಗೂ ಶುಭಾಶಯ ತಿಳಿಸಲಾಯಿತು. ಈ ವೇಳೆ ಶಾಲೆಯ ಮುಖ್ಯಸ್ಥರು ಸೇರಿದಂತೆ ಶಿಕ್ಷಕರ ವರ್ಗ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!