ಸಿಂದಗಿಯಲ್ಲಿ ಹೇಗಿದೆ ಹೊಸ ವರ್ಷದ ಸಂಭ್ರಮಾಚರಣೆ?

366

ಸಿಂದಗಿ: ಪಟ್ಟಣದ ಜನತೆಯೂ ಹೊಸ ವರ್ಷದ ಸಂಭ್ರಮಕ್ಕೆ ರೆಡಿಯಾಗ್ತಿದ್ದಾರೆ. ಇಂದು ಮಧ್ಯರಾತ್ರಿ 12ಗಂಟೆಯ ನಂತರ 2020 ವರ್ಷವನ್ನ ಸ್ವಾಗತಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಕೇಕ್ ಕಟ್ಟಿಂಗ್, ಸಿಹಿ ಹಂಚುವುದು, ಪಟಾಕಿ ಸಿಡಿಸುವುದು, ಇದರ ಜೊತೆಗೆ ಮದ್ಯ ಪ್ರಿಯರು ಭರ್ಜರಿಯಾಗಿ ಎಣ್ಣೆ ಪಾರ್ಟಿ ಮಾಡುವ ಪ್ಲಾನ್ ಮಾಡ್ತಿದ್ದಾರೆ.

ಸ್ನೇಹಿತರೊಂದಿಗೆ, ಕುಟುಂಬಸ್ಥರೊಂದಿಗೆ ಸೇರಿಕೊಂಡು ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಸಜ್ಜಾಗಿದ್ದಾರೆ. ಹೀಗಾಗಿ ಭರ್ಜರಿಯಾಗಿ ಮೋಜು ಮಸ್ತಿ ಮಾಡುತ್ತಾ ಖುಷಿಯನ್ನ ಹಂಚಿಕೊಳ್ಳಲು ಯುವ ಜನತೆ ಪ್ಲಾನ್ ಮಾಡಿದೆ.

ಇನ್ನು ಪಟ್ಟಣದಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ರೀತಿಯ ಹೆಚ್ಚಿನ ಸಮಯಾವಕಾಶ ನೀಡಿಲ್ಲ. ದಿನನಿತ್ಯದ ಸಮಯದಂತೆ ಶಾಪ್ ಗಳನ್ನ ಕ್ಲೋಸ್ ಮಾಡಲಾಗುತ್ತೆ ಅಂತಾ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅಲ್ದೇ, ಕೆಲವೊಂದು ಪಾಯಿಂಟ್ ಗಳನ್ನ ಮಾಡಿಕೊಂಡು ಸೂಕ್ತ ಬಂದೋಬಸ್ತಿ ಮಾಡಲಾಗಿದೆ ಅಂತಾ ತಿಳಿಸಿದ್ದಾರೆ.

ಹೊಸ ವರ್ಷವನ್ನ ಸಂಭ್ರಮದಿಂದ ಸ್ವಾಗತ ಮಾಡಿ. ಖುಷಿಯನ್ನ ಹಂಚಿಕೊಳ್ಳಿ. ಆದ್ರೆ, ಖುಷಿಯ ಹೊತ್ತಿನಲ್ಲಿ ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರಲ್ಲಿ ಮೇಲಿದೆ ಅನ್ನೋದು ಯಾರೂ ಮರೆಯಬಾರದು.




Leave a Reply

Your email address will not be published. Required fields are marked *

error: Content is protected !!