ಹೈ ಬಜೆಟ್ ಗೋದ್ರಾ ವಿಷ್ಯ ಏನಾಯ್ತು?

333

ನಟ ನೀನಾಸಂ ಸತೀಶ ನಟನೆಯ ಹೈ ಬಜೆಟ್ ಮೂವಿಯಾಗಿರುವ ಗೋದ್ರಾ ಚಿತ್ರದ ವಿಷ್ಯ ಏನಾಯ್ತು ಅಂದುಕೊಳ್ಳುವಷ್ಟರಲ್ಲಿ, ಡಬ್ಬಿಂಗ್ ಕೆಲಸ ಮುಗಿಸಿ ರಿಲೀಸ್ ಗೆ ಪ್ಲಾನ್ ಮಾಡಿದೆ ಚಿತ್ರ ತಂಡ. ನಟ ನೀನಾಸಂ ಸತೀಶ ವೃತ್ತಿ ಬದುಕಿನ ಹೈ ಬಜೆಟ್ ಮೂವಿಯಾಗಿದೆ. ಹೀರೋ ಇಂಟ್ರಡಕ್ಷನ್ ಸಾಂಗ್ ಗೆ ಬರೋಬ್ಬರಿ 30ರಿಂದ 40 ಲಕ್ಷ ರೂಪಾಯಿ ಖರ್ಚು ಮಾಡಲಾಗ್ತಿದೆಯಂತೆ.

ನಟ ನೀನಾಸಂ ಸತೀಶಗೆ ನಟಿ ಶ್ರದ್ಧಾ ಶ್ರೀನಾಥ ಜೋಡಿಯಾಗಿದ್ದಾರೆ. ನಟ ಅಚ್ಯುತಕುಮಾರ, ವಸಿಷ್ಠ ಸಿಂಹ ಸೇರಿದಂತೆ ಅನೇಕರ ತಾರಾಬಳಗವಿದೆ.ಈ  ಚಿತ್ರದ ಬಗ್ಗೆ ನಟ ಸತೀಶ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. . ಜಾಕೋಬ್ ಫಿಲಮ್ಸ್ ಹಾಗೂ ಲೀಡರ್ ಫಿಲ್ಮ್ ಬ್ಯಾನರ್ ನಲ್ಲಿ ಮೂಡಿ ಬರ್ತಿರುವ ಗೋದ್ರಾ ಚಿತ್ರ ಹೊಸ ವರ್ಷದ ಮೊದಲ ವಾರ ಅಥವ ಎರಡನೇ ವಾರದಲ್ಲಿ ಬರುವ ಸಾಧ್ಯತೆಯಿದೆ. ಸಿನಿ ಪ್ರಿಯರಿಗೆ ಇಷ್ಟವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.




Leave a Reply

Your email address will not be published. Required fields are marked *

error: Content is protected !!