ರಾಜ್ಯದಲ್ಲಿ ಇಳಿಕೆ ಕಾಣ್ತಿರುವ ಕರೋನಾ: ಜಿಲ್ಲಾವಾರು ಲಿಸ್ಟ್ ಇಲ್ಲಿದೆ

275

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ನಿಧಾನವಾಗಿ ಕರೋನಾ ಸೋಂಕಿತರ ಸಂಖ್ಯೆ ಇಳಿಕೆ ಕಾಣ್ತಿದೆ. ಕಳೆದ 24 ಗಂಟೆಯಲ್ಲಿ 5018 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಹಂತ ಹಂತವಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ. ಇದುವರೆಗೂ 7,70,604 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇಂದು 8005 ಜನರು ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 6,53,829 ಜನರು ಗುಣಮುಖರಾಗಿದ್ದಾರೆ. 106214 ಪ್ರಕರಣಗಳು ಸಕ್ರಿಯವಾಗಿವೆ. ಇಂದು 64 ಜನರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 10,542ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ.

ಬಾಗಲಕೋಟೆ 94, ಬಳ್ಳಾರಿ 186, ಬೆಳಗಾವಿ 79, ಬೆಂ.ಗ್ರಾ 173, ಬೆಂ.ನ 2,481, ಬೀದರ 6, ಚಾಮರಾಜನಗರ 54, ಚಿಕ್ಕಬಳ್ಳಾಪುರ 193, ಚಿಕ್ಕಮಗಳೂರು 69, ಚಿತ್ರದುರ್ಗ 106, ದ.ಕ 107, ದಾವಣಗೆರೆ 104, ಧಾರವಾಡ 84, ಗದಗ 19, ಹಾಸನ 105, ಹಾವೇರಿ 69, ಕಲಬುರಗಿ 75, ಕೊಡಗು 32, ಕೋಲಾರ 41, ಕೊಪ್ಪಳ 106, ಮಂಡ್ಯ 130, ಮೈಸೂರು 151, ರಾಯಚೂರು 38, ರಾಮನಗರ 11, ಶಿವಮೊಗ್ಗ 63, ತುಮಕೂರು 253, ಉಡುಪಿ 101, ಉ.ಕ 28, ವಿಜಯಪುರ 44 ಹಾಗೂ ಯಾದಗಿರಿಯಲ್ಲಿ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!