ವಿಶ್ವಕಪ್ ಮಹಾಕದನಕ್ಕೆ ಕ್ಷಣಗಣನೆ

291

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕ್ರಿಕೆಟ್ ಪ್ರೇಮಿಗಳ ಹಬ್ಬವೆಂದೇ ಹೇಳುವ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಗುರುವಾರದಿಂದ ಒಂದೂವರೆ ತಿಂಗಳ ಕಾಲ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್-2023 ಟೂರ್ನಿ ನಡೆಯಲಿದೆ. ಅದರಲ್ಲಿ ಈ ಬಾರಿ ಭಾರತದ ನೆಲದಲ್ಲಿ ವಿಶ್ವಕಪ್ ಕದನ ಆಯೋಜಿಸಲಾಗಿದ್ದು, ಮತ್ತಷ್ಟು ಜೋಶ್ ಬಂದಿದೆ.

ಟೂರ್ನಿ ಆರಂಭಕ್ಕೂ ಮೊದ್ಲು ಎಲ್ಲ ತಂಡಗಳು ಎರಡು ಅಭ್ಯಾಸ ಪಂದ್ಯಗಳನ್ನು ಆಡಬೇಕಿತ್ತು. ಆದರೆ, ಮಳೆಯಿಂದಾಗಿ ಕೆಲ ಪಂದ್ಯಗಳು ರದ್ದಾಗಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ಮಳೆಯಿಂದಾಗಿ ಭಾರತದ ಎರಡೂ ಅಭ್ಯಾಸ ಪಂದ್ಯಗಳು ರದ್ದಾಗಿವೆ. ಹೀಗಾಗಿ ಅಕ್ಟೋಬರ್ 8ರಂದು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಕಣಕ್ಕೆ ಇಳಿಯಲಿದೆ. ಇಂಡಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಕಪ್ ಗೆಲ್ಲುವ ಫೇವರಿಟ್ ತಂಡಗಳು ಎನಿಸಿಕೊಂಡಿವೆ. ಪಾಕಿಸ್ತಾನ, ಸೌಥ್ ಆಫ್ರಿಕಾ ಸೆಮಿ ಫೈನಲ್ ಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಕ್ರಿಕೆಟ್ ಆಟ ಎಲ್ಲ ಲೆಕ್ಕಾಚಾರ ತಲೆ ಕೆಳಗೆ ಮಾಡುತ್ತೆ.

ಶ್ರೀಲಂಕಾ, ಬಾಂಗ್ಲಾ, ಅಫ್ಘನ್, ನೆದರ್ಲೆಂಡ್ ಕೊನೆಯ ನಾಲ್ಕು ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಏಷ್ಯ ಕಪ್ ಗೆದ್ದಿರುವ ಭಾರತ ಫುಲ್ ಫಾರ್ಮ್ ನಲ್ಲಿದೆ. ಕೊಹ್ಲಿ, ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಗಿಲ್ ಫುಲ್ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ನಲ್ಲಿ ಬಂದರೆ ಸಿರಾಜ್, ಜಡೇಜಾ, ಕುಲದೀಪ್ ಯಾದವ್, ಶೆಮಿ, ಬೂಮ್ರಾ ಸಹ ಕಮಾಲ್ ಮಾಡುತ್ತಿದ್ದು, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಕಿಕ್ ನೀಡಲಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ಪಂದ್ಯಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!