ಒಂದು ಪಾಸ್ ಮತ್ತು ತಾಯಿ ಮಗಳ ಕೊನೆ ಕ್ಷಣಗಳ ಕಣ್ಣೀರ ಕಥೆ

415

ಈ ಬದುಕು ಒಂದಲ್ಲ ಒಂದು ದಿನ ಮುಗಿಯುತ್ತೆ. ಆದ್ರೂ, ಜೀವನದ ಜೊತೆಗೆ ನಿರಂತರವಾಗಿ ಹೋರಾಟ ಮಾಡ್ತೀವಿ. ಯಾಕಂದ್ರೆ, ಸಂಬಂಧಗಳ ಬಂಧನದ ಕೊಂಡಿ ಕಳಚಿಕೊಂಡು ಹೋಗಲು ಯಾರಿಗೆತಾನೆ ಇಷ್ಟ ಹೇಳಿ. ಆದ್ರೆ, ಸಾವು ಎಂಥಾ ಗಟ್ಟಿಯಾದ ಬಂಧನವಾಗಿದ್ರೂ ಕ್ಷಣಮಾತ್ರದಲ್ಲಿ ತುಂಡರಿಸುತ್ತೆ. ಈ ಮಾತು ಈಗ್ಯಾಕೆ ಅನ್ನೋದಕ್ಕೆ ಸಿಲಿಕಾನ್ ಸಿಟಿಯಲ್ಲಿ ನಡೆದ ತಾಯಿ ಮಗಳ ಕೊನೆ ಕ್ಷಣಗಳ ಭೇಟಿ..

ಲಾಕ್ ಡೌನ್ ನಿಂದಾಗಿ ಹೊರಗೆ ಬಂದು ಸುಖಾಸುಮ್ಮೆನೆ ತಿರುಗಾಡಲು ಪೊಲೀಸ್ರು ಬಿಡುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯ ಕೆಲಸಕ್ಕೆ ಹೋಗುವವರಿಗೆ ಪಾಸ್ ವಿತರಿಸಲಾಗ್ತಿದೆ. ಅದರಂತೆ ಮಹಿಳೆಯೊಬ್ಬರು ತನ್ಗೊಂದು ಪಾಸ್ ಬೇಕೆಂದು ಐಜಿಪಿ ಡಿ.ರೂಪಾ ಅವರನ್ನ ಸಂಪರ್ಕಿಸ್ತಾರೆ. ಅವರು ಡಿಸಿಪಿ ಶರಣಪ್ಪ ಅವರಿಂದ ಪಾಸ್ ಸಿಗುವ ವ್ಯವಸ್ಥೆ ಮಾಡಿಸ್ತಾರೆ. ಈ ಪಾಸ್ ಹಿಂದೆ ಒಂದು ಜೀವದ ಕೊನೆ ಕ್ಷಣಗಳಲ್ಲಿ ಜೊತೆಗಿರಬೇಕು ಅನ್ನೋ ಭಾವನಾತ್ಮಕ ನಂಟಿದೆ. ಅದುವೆ ತಾಯಿ ಮಗಳ ಹೊಕ್ಕಳಬಳ್ಳಿ ಸಂಬಂಧ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಾಯಿ, ಕೊನೆಯ ಕ್ಷಣಗಳಲ್ಲಿ ಮಗಳು ತನ್ನ ಜೊತೆ ಇರಬೇಕು ಎಂದು ಬಯಸುತ್ತಾಳೆ. ಅದರಂತೆ ಮಗಳು ಕೆಲ ದಿನಗಳ ಕಾಲ ತಾಯಿಯೊಂದಿಗೆ ಆಸ್ಪತ್ರೆಯಲ್ಲಿ ಇರ್ತಾಳೆ. ಬಳಿಕ ಕೆಲ ದಿನಗಳಲ್ಲಿ ಮಗಳ ಕಣ್ಮುಂದೆಯೇ ತಾಯಿ ಕೊನೆಯುಸಿರೆಯುತ್ತಾಳೆ.

ಕೆಲ ಘಟನೆಗಳು ನಮ್ಮಲ್ಲಿನ ಒಳ್ಳೆತನವನ್ನ ಮತ್ತಷ್ಟು ಪ್ರೋತ್ಸಾಹಿಸುತ್ತವೆ. ಹೀಗಾಗಿಯೇ ತಾಯಿ ಸಾವಿನ ನೋವಿನ ನಡುವೆ ಆಕೆ ಪೊಲೀಸರಿಗೆ ಪಾಸ್ ವಾಪಸ್ ಮಾಡುತ್ತಾಳೆ. ನನ್ನಂತೆ ಮತ್ತೆಯಾರಿಗಾದ್ರೂ ಈ ಪಾಸ್ ಅವಶ್ಯಕತೆಯಿರುತ್ತೆ. ಅವರಿಗೆ ಕೊಡಿ ಎಂದು ಹೇಳಿ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ನೀಡಿ ಐಜಿಪಿ ಡಿ.ರೂಪಾ ಅವರಿಗೆ ಮೆಸೇಜ್ ಮಾಡ್ತಾರೆ. ಅಲ್ಲಿಗೆ ಎಲ್ಲವೂ ಮೌನ…

https://twitter.com/D_Roopa_IPS/status/1251176172165062656?s=20



Leave a Reply

Your email address will not be published. Required fields are marked *

error: Content is protected !!