ಗೋ ಶಾಲೆಗಳಿಗೆ ಹಿಂಡಿ ವಿತರಣೆ

419

ಅಥಣಿ: ಲಾಕ್ ಡೌನ್ ನಿಂದಾಗಿ ಹೈರಾಣಾಗ್ತಿರುವ ಜನರಿಗೆ ಎಲ್ಲೆಡೆ ನೆರವು ನೀಡಲಾಗ್ತಿದೆ. ಆದ್ರೆ, ಏನೂ ಸಿಗದೆ ಒದ್ದಾಡ್ತಿರುವ ಮೂಕಜೀವಿಗಳ ಪಾಡೇನು? ಹೀಗಾಗಿ ಕೆಲವು ಕಡೆ ಪ್ರಾಣಿಗಳಿಗೂ ಒಂದಿಷ್ಟು ವ್ಯವಸ್ಥೆ ಮಾಡಲಾಗ್ತಿದೆ.

ಲಾಕ್ ಡೌನ್ ಇರುವದರಿಂದ ಗೋ ಶಾಲೆಗಳಲ್ಲಿರುವ ಹಸುಗಳಿಗೆ ಮೇವಿನ ಕೊರತೆಯಿದೆ. ಇದ್ರಿಂದಾಗಿ   ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅಥಣಿ ಪಟ್ಟಣದ ಹೊರ ವಲಯದಲ್ಲಿರುವ ಕೃಷ್ಣಾ ಗೋ ಶಾಲೆಗೆ ಹಿಂಡಿಯನ್ನ ವಿತರಿಸಿದೆ. ಗೋಧಾಮ ಮತ್ತು ಶ್ರೀ ಕೃಷ್ಣ ಗೋ ಶಾಲೆಗಳಿಗೆ  ಆಹಾರ ಕೊರೆತೆ ಇರುವದನ್ನು ಗಮನಿಸಿ  50 ಚೀಲಗಳಂತೆ  2.50 ಟನ್, ಒಟ್ಟು 100 ಚೀಲಗಳು 5 ಟನ್ ಗಳಷ್ಟು ಗೋವು ಹಿಂಡಿಯನ್ನ ನೀಡಲಾಗ್ತಿದೆ.

ಕರ್ನಾಟಕ ಉತ್ತರ ಪ್ರಾಂತದ ಸಹಸಂಘ ಚಾಲಕರಾದ ಅರವಿಂದರಾವ ದೇಶಪಾಂಡೆ ಹಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಸ್ವಯಂ ಸೇವಕರಾದ ಸಚೀನ ಕುಲಕರ್ಣಿ, ಆನಂದ ಟೊಣಪಿ, ಮಾರುತಿ ಮೋಹಿತೆ, ಅಶೋಕ ದಾನಗೌಡರ, ಬಾಬುಸಿಂಗ, ಹೃಷಿಕೇಶ ದೇಶಪಾಂಡೆ, ರಾಜು ಗುಡೊಡಗಿ, ಆನಂದ ದೇಶಪಾಂಡೆ ಮತ್ತು ಗೋಶಾಲೆಗಳ ಸಂಚಾಲಕರಾದ ಜಯರಾಮ ಆಚಾರ್ಯರು, ಸೋಮಯ್ಯ ರಾಜು, ಓಂಕಾರ ಇದ್ದರು.




Leave a Reply

Your email address will not be published. Required fields are marked *

error: Content is protected !!