ಪತ್ರಕರ್ತರಿಗೆ 10 ಲಕ್ಷ ವಿಮಾ ಸೌಲಭ್ಯ..

426

ಕೋಲ್ಕತ್ತಾ: ಕರೋನಾ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರು ಸಹ ದಿನದ 24 ಗಂಟೆ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳ ಸರ್ಕಾರ ಅವರಿಗೆ 10 ಲಕ್ಷ ರೂಪಾಯಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯ ಘೋಷಿಸಿದೆ.

ಕೋವಿಡ್ 19 ವಿಚಾರದಲ್ಲಿ ಬರೀ ಪಾಸಿಟಿವ್ ಕೇಸ್ ಗಳ ಬಗ್ಗೆ ಸುದ್ದಿ ಕೊಡ್ಬೇಡಿ. ಜನರಿಗೆ ಹದರಿಸುವ, ಆತಂಕದ ಸುದ್ದಿಗಳನ್ನ ನೋಡಿ ಅವರ ಮಾನಸಿಕ ಸ್ಥೈರ್ಯ ಕಳೆಯುವಂತೆ ಮಾಡ್ಬೇಡಿ. ಸರ್ಕಾರದೊಂದಿಗೆ ಕೈಜೋಡಿಸಿ, ಒಳ್ಳೊಳ್ಳೆ ಸುದ್ದಿ ಕೊಡಿ ಎಂದು ಸಿಎಂ ಮಮತಾ ಬ್ಯಾನರ್ಜಿ, ವಿಡಿಯೋ ಸಂವಾದದ ವೇಳೆ ಹೇಳಿದ್ದಾರೆ.

ಪತ್ರಕರ್ತರಿಗೆ ಜೀವ ವಿಮೆ ನೀಡುವ ಕುರಿತು ಕೆಲ ದಿನಗಳ ಹಿಂದೆಯೇ ‘ಪ್ರಜಾಸ್ತ್ರ’ದಲ್ಲಿ ‘ನಮಸ್ತೆ ಸಿಎಂ.. ಸುದ್ದಿಮನೆಯ ಸಂಗಾತಿಗಳಿಗೂ ಜೀವ ವಿಮೆ ಘೋಷಿಸಬಹುದಾ? ಅನ್ನೋ ಲೇಖನ ರೂಪದಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಚಿಂತನೆ ನಡೆಸಿಲ್ಲ. ಆದ್ರೆ, ಇತರೆ ಮಾಧ್ಯಮಗಳು ಸರ್ಕಾರವನ್ನ ಪ್ರಶ್ನೆ ಮಾಡುವುದನ್ನ ಮರೆತಿರುವುದು ವಿಪರ್ಯಾಸದ ಸಂಗತಿ.

ಮನರಂಜನೆಯ ಶೂಟಿಂಗ್ ಎಲ್ಲ ನಿಂತಿದೆ. ಜನರು ನ್ಯೂಸ್ ಚಾನೆಲ್ ಗಳನ್ನ ಹೆಚ್ಚಿಗೆ ನೋಡ್ತಿದ್ದಾರೆ. ಹೀಗಾಗಿ ಮಾಧ್ಯಮ ಜನರಲ್ಲಿ ಕರೋನಾ ಕುರಿತು ಧೈರ್ಯ ತುಂಬುವ ಕೆಲಸ ಮಾಡ್ಲಿ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಕರೋನಾ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಗರಂ ಆಗಿ ಹೇಳಿದ್ರು. ಇಂದು ಒಂದಿಷ್ಟು ಸಲಹೆ ಸೂಚನೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!