ವಾರ ಮೊದ್ಲೇ ‘ಪೈಲ್ವಾನ್’ ಅಬ್ಬರ ಶುರು

728

ನಟ ಕಿಚ್ಚ ಸುದೀಪ ಅಭಿನಯದ ಪೈಲ್ವಾನ್ ಮೂವಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ. ಅಭಿನಯ ಚಕ್ರವರ್ತಿಯ ಅಭಿಮಾನಿಗಳು ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಇದೀಗ ಟಿಕೆಟ್ ಬುಕ್ಕಿಂಗ್ ಭಾನುವಾರದಿಂದಲೇ ಶುರುವಾಗುತ್ತಿದೆ.

ಯೆಸ್, ನಟ ಸುದೀಪ ನಟನೆಯ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಸೆಪ್ಟೆಂಬರ್ 12ರಂದು ಬಿಡುಗಡೆಯಾಗ್ತಿದೆ. ಆದ್ರೆ, ಚಿತ್ರದ ಟಿಕೆಟ್ ಬುಕ್ಕಿಂಗ್ ನಾಲ್ಕು ದಿನ ಮುಂಚಿತವಾಗಿ ಶುರುವಾಗ್ತಿದೆ. ಈ ಮೂಲಕ ಪೈಲ್ವಾನ್ ಅಬ್ಬರ ಎಷ್ಟರ ಮಟ್ಟಿಗಿದೆ ಅನ್ನೋದು ಸಾಬೀತಾಗುತ್ತಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ 3 ಸಾವಿರ ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಹೀಗಾಗಿ ಕಿಚ್ಚಿನ ಅಭಿಮಾನಿಗಳಿಗೆ ಸೆಪ್ಟೆಂಬರ್ 12ರಂದು ದೊಡ್ಡ ಹಬ್ಬ. ಅದಕ್ಕಾಗಿ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ಭಾನುವಾರದಿಂದ ಶುರುವಾಗ್ತಿದೆ.




Leave a Reply

Your email address will not be published. Required fields are marked *

error: Content is protected !!