ಸಚಿನ್, ಅಂಬಾನಿ, ಮಜುಂದಾರ್ ಕುರಿತು ಸ್ಫೋಟಕ ಮಾಹಿತಿ ಬಹಿರಂಗ

229

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಂಡೋರಾ ಪೇಪರ್ಸ್ ನಿಂದ ಸ್ಫೋಟಕವಾದ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ 91 ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಸಾವಿರಾರು ಜನ ರಾಜಕಾರಣಿಗಳು, ಕ್ರೀಡಾ ತಾರೆಯರು, ಉದ್ಯಮಿಗಳು, ಸಿನಿಮಾ ತಾರೆಯರ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಲಾಗಿದೆ.

ಇದರಲ್ಲಿ ಭಾರತೀಯ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತಂಡೂಲ್ಕರ್, ಉದ್ಯಮಿಗಳಾದ ಅನಿಲ್ ಅಂಬಾನಿ, ಕಿರಣ್ ಮಜುಂದಾರ್ ಶಾ ಪತಿ ಸೇರಿದಂತೆ 300 ಭಾರತೀಯರು ತೆರಿಗೆ ವಂಚಿಸಿರುವ ಕುರಿತು ಮಾಹಿತಿ ಬಹಿರಂಗವಾಗಿದೆ. ಅಲ್ದೇ, ವಿದೇಶದಲ್ಲಿ ಕಂಪನಿ ಹೊಂದಿದವರು, ಭಾರತದಲ್ಲಿ ತಮ್ಮ ಸಂಸ್ಥೆ ದಿವಾಳಿಯಾಗಿದೆ ಎಂದು ತೋರಿಸಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಪನಾಮಾ ಪೇಪರ್ ನಲ್ಲಿ ಮಾಹಿತಿ ಸೋರಿಕೆ ಬಳಿಕೆ ವಿದೇಶದಲ್ಲಿನ ತಮ್ಮ ಆಸ್ತಿ ನಗದೀಕರಣ ಮಾಡಲು 2016ರಲ್ಲಿ ಮನವಿ ಮಾಡಿದ್ದ ಮಾಹಿತಿ ಸಹ ಬಹಿರಂಗವಾಗಿದೆ.

ಬ್ರಟಿನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ, ಈಕ್ವೆಡಾರ್ ರಾಷ್ಟ್ರಪತಿ, ಜೋರ್ಡಾನ್ ರಾಜ, ಪಾಪ್ ಸಿಂಗ್ ಶಕೀರಾ, ಸೂಪರ್ ಮಾಡೆಲ್ ಕ್ಲೌಡಿಯಾ ಶಿಫೆರ್ ಸೇರಿದಂತೆ ನೂರಾರು ಬಿಲಿಯನರ್ಸ್ ಗಳ ಬಣ್ಣ ಬಯಲಾಗಿದೆ. ಇದಕ್ಕಾಗಿ ಜಗತ್ತಿನಾದ್ಯಂತ 600 ಪತ್ರಕರ್ತರನ್ನೊಳಗೊಂಡು ತನಿಖೆ ನಡೆಸಲಾಗಿದೆ. ಇದನ್ನು ಸಂಘಟಿಸಲು ಐಸಿಐಜೆ 2 ವರ್ಷ ತೆಗೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!