‘ಜನಸೇನಾ’ಗೆ 200 ಕೋಟಿ ಕೊಡಲು ಮುಂದಾದ ಫ್ಯಾನ್ಸ್.. ಪವರ್ ಸ್ಟಾರ್ ಹೇಳಿದ್ದೇನು?

345

ಪ್ರಜಾಸ್ತ್ರ ಸುದ್ದಿ

ಟಾಲಿವುಡ್ ನಟ, ರಾಜಕಾರಣಿ ಪವನ ಕಲ್ಯಾಣ ಅವರ ಜನಸೇನಾ ಪಕ್ಷಕ್ಕೆ ಅಭಿಮಾನಿಗಳು ದೇಣಿಗೆ ಸಂಗ್ರಹ ಅಭಿಯಾನ ಶುರು ಮಾಡಿದ್ದಾರೆ. ಅದು ಅವರ ನೆಚ್ಚಿನ ನಟನ 49ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ಫಂಡ್ ನೀಡಲು ನಿರ್ಧರಿಸಿದ್ದು, ಇದರ ಮೊತ್ತ ಬರೋಬ್ಬರಿ 200 ಕೋಟಿ ರೂಪಾಯಿ.

ಅಭಿಮಾನಿಗಳು 200 ಕೋಟಿ ರೂಪಾಯಿ ಕೊಡಲು ಮಾಡಿರುವ ಪ್ಲಾನ್ ಏನು? ಇದು ಸಾಧ್ಯವಾಗುವುದು ಹೇಗೆ? ಈ ಬಗ್ಗೆ ಪವನ ಕಲ್ಯಾಣ ಮತ್ತು ಪಕ್ಷದ ರಾಜಕೀಯ ಕಾರ್ಯದರ್ಶಿ ಏನು ಹೇಳಿದ್ದಾರೆ ಅನ್ನೋದು ಸಹ ಮುಖ್ಯವಾಗಿದೆ. ಜನ ಸೈನಿಕ ಅನ್ನೋ ಹೆಸರಿನ ಮೂಲಕ, 2ಕೋಟಿ ಟ್ವೀಟರ್ ಅಭಿಯಾನದೊಂದಿಗೆ 200 ಕೋಟಿ ರೂಪಾಯಿ ಫಂಡ್ ಸಂಗ್ರಹಿಸಲು ಮುಂದಾಗಿದ್ದಾರೆ.

ಈಗಾಗ್ಲೇ ಸೋಷಿಯಲ್ ಮೀಡಿಯಾಗಳಾದ ವಾಟ್ಸಪ್, ಫೇಸ್ ಬುಕ್, ಇನ್ಸಟಾ ಸೇರಿದಂತೆ ಎಲ್ಲೆಡೆ ಹರಿದಾಡ್ತಿದೆ. ಜನಸೇನಾ ಪಕ್ಷದ ಬ್ಯಾಂಕ್ ಅಕೌಂಟ್ ಹಾಗೂ ಐಎಫ್ ಸಿ ಕೋಡ್ ಸಮೇತ ಮೆಸೇಜ್ ವೈರಲ್ ಆಗ್ತಿದೆ. ಅದು ಹೇಗೆ ಅಂದ್ರೆ, ಪವನ್ ಕಲ್ಯಾಣ ಅಭಿಮಾನಿಗಳು ಒಬ್ಬರಂತೆ 100 ರೂಪಾಯಿ ಆನ್ ಲೈನ್ ಮೂಲಕ ಅಕೌಂಟ್ ಗೆ ಹಾಕುವ ಮೂಲಕ, ಸೆಪ್ಟೆಂಬರ್ 2ರೊಳಗೆ 200 ಕೋಟಿ ರೂಪಾಯಿ ಸಂಗ್ರಹಕ್ಕೆ ಪ್ಲಾನ್ ನಡೆಸಿದ್ದಾರೆ.

ಆದ್ರೆ, ಜನಸೇನಾ ಪಕ್ಷ, ಅಭಿಮಾನಿಗಳಿಂದ ದೇಣಿಗೆ ಸಂಗ್ರಹಿಸುವುದನ್ನ ವಿರೋಧಿಸುತ್ತೆ ಎಂದು ರಾಜಕೀಯ ಕಾರ್ಯದರ್ಶಿ ಹೇಳಿದ್ದಾರೆ. ಅಭಿಮಾನಿಗಳಿಂದ ಹಣ ಸಂಗ್ರಹ ಸಂಬಂಧ ಅಧಿಕೃತವಾಗಿ ಯಾರೊಂದಿಗೂ ಚರ್ಚೆ ಸಹ ಮಾಡಿಲ್ಲ ಎಂದಿರುವ ಅವರು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಬ್ಯಾಂಕ್ ಅಕೌಂಟ್ ನಂಬರ್ ಜನಸೇನಾ ಪಕ್ಷದ್ದು ಎಂದು ಹೇಳಿದ್ದಾರೆ. ಇನ್ನು ಸಂಸ್ಥಾಪಕ ಪವನ್ ಕಲ್ಯಾಣ ಸಹ ಅಭಿಮಾನಿಗಳಿಂದ ದೇಣಿಗೆ ಸಂಗ್ರಹಕ್ಕೆ ಒಪ್ಪಿಗೆ ನೀಡಿಲ್ಲ.




Leave a Reply

Your email address will not be published. Required fields are marked *

error: Content is protected !!