ಬೆಂಗಳೂರಲ್ಲಿ ಶ್ರೀಗಳ ಅಂತ್ಯಕ್ರಿಯೆ: 3 ದಿನ ಶೋಕಾಚರಣೆ: ಸಿಎಂ

495

ಉಡುಪಿ: ವಿಶೇಶ್ವರತೀರ್ಥ ಶ್ರೀಗಳು ಇಂದು ಬೆಳಗ್ಗೆ ಕೃಷ್ಣನ ಪಾದ ಸೇರಿದ್ದಾರೆ. ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಉಡುಪಿಯಲ್ಲಿ ಮೊದಲು ವಿಧಿ ವಿಧಾನಗಳು ಮುಗಿದ್ಮೇಲೆ ಅವರ ಶರೀರವನ್ನ ಬೆಂಗಳೂರಿಗೆ ಸೇನಾ ಹೆಲಿಕಾಪ್ಟರ್ ನಲ್ಲಿ ತೆಗೆದುಕೊಂಡು ಹೋಗಲಾಗುತ್ತೆ.

ಬೆಂಗಳೂರಿನ ನ್ಯಾಷನಲ್ ಕ್ಯಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ. ಹೀಗಾಗಿ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತೆ ಅಂತಾ ಹೇಳಿದ್ದಾರೆ. ಬಳಿಕ ವಿದ್ಯಾಪೀಠದಲ್ಲಿ ಅವರ ಬೃಂದಾವನದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಇದು ಶ್ರೀಗಳು ಲಿಕಿತವಾಗಿ ಬರೆದ ಕಾರಣ, ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಬೃಂದಾವನದಲ್ಲಿ ಅವರ ಸಂಸ್ಕಾರ ನಡೆಯಲಿದೆ.

ಯತಿಗಳ ಅಂತಿಮ ಯಾತ್ರೆಯಲ್ಲಿ ಅನೇಕ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಕೇಂದ್ರದ ನಾಯಕರು ಸಹ ಬರುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ. ಹೀಗಾಗಿ ನ್ಯಾಷನಲ್ ಕ್ಯಾಲೇಜು ಮೈದಾನದ ಒಂದನೇ ಗೇಟ್ ನಲ್ಲಿ ಗಣ್ಯರಿಗೆ ವ್ಯವಸ್ಥೆ ಮಾಡಲಾಗುತ್ತೆ ಅಂತಾ ಹೇಳಲಾಗಿದೆ.




Leave a Reply

Your email address will not be published. Required fields are marked *

error: Content is protected !!