ಪಿಎಫ್ಐ ಸೇರಿ 8 ಅಂಗಸಂಸ್ಥೆಗಳು ಬ್ಯಾನ್

153

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಪಿಎಫ್ಐ ಸೇರಿದಂತೆ ಅದರ 8 ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಮುಂದಿನ ಐದು ವರ್ಷಗಳ ಕಾಲ ಪಾಫ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಸಂಘಟನೆಯು ಉಗ್ರಗಾಮಿ ಸಂಘಟನೆಗಳೊಂದಿಗೆ ಚಟುವಟಿಕೆ ನಡೆಸಿದೆ ಅನ್ನೋ ಸಾಕ್ಷಿಗಳನ್ನು ಕಲೆ ಹಾಕಿದೆ.

ಇಡಿ ಹಾಗೂ ಎನ್ಐಎ ಹಲವು ಸಾಕ್ಷಿಗಳನ್ನು ಸಂಗ್ರಹಿಸಿ ಕಳೆದೊಂದು ವಾರದಿಂದ ದೇಶ್ಯಾದ್ಯಂತ ದಾಳಿ ನಡೆಸಿದೆ. ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳ ಕಚೇರಿ, ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಲಾಗಿದೆ. ಮಂಗಳವಾರ 7 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ 170 ಜನರನ್ನು ಬಂಧಿಸಲಾಗಿದೆ. ಸೋಮವಾರ ಹಾಗೂ ಮಂಗಳವಾರ ಕರ್ನಾಟಕದಲ್ಲಿ 75 ಜನರನ್ನು ವಶಕ್ಕೆ ಪಡೆಯಲಾಗಿದೆ.

ಈಗಾಗ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ 14 ಪ್ರಕರಣಗಳ ಮೇಲೆ ಪಿಎಫ್ಐ ವಿರುದ್ಧ ಕೇಸ್ ದಾಖಲಿಸಿದೆ. 355 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರ ಜೊತೆಗೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಸಂಬಂಧ ಪ್ರತ್ಯೇಕವಾಗಿ ಎರಡು ಕೇಸ್ ದಾಖಲಿಸಿದೆ.


TAG


Leave a Reply

Your email address will not be published. Required fields are marked *

error: Content is protected !!