ಪ್ರಜಾಸ್ತ್ರ ಸುದ್ದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 1, ಸೋಮವಾರ ಬೆಳಗ್ಗೆ ಕೋವಿಡ್ ಲಸಿಕೆಯನ್ನ ಪಡೆದಿದ್ದಾರೆ. ಭಾರತ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ನಿಂದ ಅಭಿವೃದ್ಧಿಗೊಳಿಸಿದ ಲಸಿಕೆಯನ್ನ ಪ್ರಧಾನಿ ಪಡೆದಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಮೊದಲ ಡೋಸ್ ಪಡೆದಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಏಮ್ಸ್ ಗೆ ತೆರೆಳಿದ ಅವರು ಕೋವಕ್ಸಿನ್ ಲಸಿಕೆ ಪಡೆದಿದ್ದು, ಕರೋನಾ ಜಾಗತಿಕ ಹೋರಾಟಕ್ಕೆ ಶಕ್ತಿ ತುಂಬಲು ವೈದ್ಯರು ಹಾಗೂ ವಿಜ್ಞಾನಿಗಳು ಕೆಲಸ ಮಾಡ್ತಿದ್ದಾರೆ. ಅರ್ಹರು ಲಸಿಕೆ ಪಡೆಯಿರಿ ಎಂದು ಕರೆ ನೀಡಿದ್ರು.