ಬ್ರೇಕಿಂಗ್ ನ್ಯೂಸ್: ಮಾರ್ಚ್ 22ರಂದು ‘ಜನತಾ ಕರ್ಫ್ಯೂ’ಗೆ ಪ್ರಧಾನಿ ಮೋದಿ ಕರೆ

720

ಇಂದು ಇಡೀ ವಿಶ್ವ ಕರೋನಾ ಸಮಸ್ಯೆ ಎದುರಿಸುತ್ತಿದೆ. ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಈ ಬಾರಿ ಎಂಥಾ ಸಂಕಷ್ಟವಿದೆ ಅಂದ್ರೆ, ಇಡೀ ಮಾನವ ಸಂಕುಲ ಸಂಕಷ್ಟಕ್ಕೆ ತುತ್ತಾಗಿದೆ. ಕಳೆದ ಎರಡು ತಿಂಗಳಲ್ಲಿ ಜನ ಯುದ್ಧದ ಪರಿಸ್ಥಿತಿಯನ್ನ ನೋಡ್ತಿದ್ದಾರೆ.

ದೇಶದ 130 ಕೋಟಿ ಜನಕ್ಕೆ ಕರೋನಾ ಸಂಕಟ ಕಾಡ್ತಿದೆ. ಇದ್ರಿಂದ ನಾವು ತಪ್ಪಿಸಿಕೊಂಡಿದ್ದೇವೆ ಎಂದು ತಿಳಿದುಕೊಳ್ಳಬೇಡಿ. ಇದುವರೆಗೂ ವೈದ್ಯಕೀಯ ಕ್ಷೇತ್ರದಿಂದ ಔಷಧಿ ಸಿಕ್ಕಿಲ್ಲ. ಹೀಗಾಗಿ ಕರೋನಾದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂಥಾ ಸ್ಥಿತಿಯಲ್ಲಿ ಚಿಂತಿಯಾಗುವುದು ಸಹಜ. ಹೀಗಾಗಿ ಪ್ರತಿಯೊಬ್ಬ ಭಾರತೀಯ ಜಾಗೃತನಾಗಿರಬೇಕು. ದೇಶದಲ್ಲಿ ಕರೋನಾ ಸ್ಥಿತಿ ಏರಿಕೆಯಾಗ್ತಿದೆ. ಇದರ ರೆಕಾರ್ಡ್ ನ್ನ ಭಾರತ ಸರ್ಕಾರ ಇಡುತ್ತಿದೆ. ಹೀಗಾಗಿ ಇದನ್ನ ಕಂಟ್ರೋಲ್ ಮಾಡಲು ಸಿದ್ಧವಾಗಿದೆ.

ನಿಮ್ಮಲ್ಲಿ ಒಂದಿಷ್ಟು ದಿನಗಳು, ಕೆಲ ವಾರಗಳು ಬೇಕು ಎಂದು ಕೇಳಲು ಬಂದಿದ್ದೇನೆ. ನಿಮ್ಮಲ್ಲಿ ನಾನು ಏನೇ ಕೇಳಿದ್ರೂ ನಿರಾಸೆ ಮಾಡಿಲ್ಲ. ಹೀಗಾಗಿ ಎರಡು ಪ್ರಮುಖ ಮುಖ್ಯ ಅಂಶಗಳಿವೆ. ಮೊದಲು ಶಪಥ ಮಾಡಬೇಕು. ಎರಡು ತಾಳ್ಮೆ ಇರಬೇಕು. ಈ ಎರಡು ವಿಚಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾಥ್ ನೀಡಿದ್ರೆ, ಮಹಾಮಾರಿ ವಿರುದ್ಧ ನಾವು ಹೋರಾಡಬಹುದು. ನಾವು ಆರೋಗ್ಯವಾಗಿದ್ರೆ ಜಗತ್ತು ಆರೋಗ್ಯವಾಗಿರುತ್ತೆ. ಇದನ್ನ ನಾವು ಅರ್ಥ ಮಾಡಿಕೊಳ್ಳೋಣ. ಇದ್ರಿಂದ ಕರೋನಾ ಸೋಂಕು ಹರದಂತೆ ತಡೆಯಬಹುದು.

ಮನೆಯಿಂದ ಹೊರ ಬರುವುದು ಕಡಿಮೆ ಮಾಡಿ. ಜನರೊಂದಿಗೆ ಬರೆಯುವುದು ಕಡಿಮೆ ಮಾಡಿ. ಜನರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ನಿಮ್ಮ ಕೆಲಸಗಳು ಏನೇ ಇದ್ರೂ ಆದಷ್ಟು ಮನೆಯಿಂದಲೇ ಮಾಡಿ. ತುಂಬಾ ಅವಶ್ಯಕತೆಯಿದ್ರೆ ಮಾತ್ರ ಮನೆಯಿಂದ ಹೊರ ಬನ್ನಿ. ಮನೆಯಲ್ಲಿರುವ ಹಿರಿಯರ ಬಗ್ಗೆ ಕಾಳಜಿ ವಹಿಸಿ. 60 ವರ್ಷ ಮೇಲ್ಪಟ್ಟ ಹಿರಿಯರು ಇನ್ನು ಕೆಲ ದಿನಗಳ ಕಾಲ ಹೊರಗೆ ಬರಬೇಡಿ. ಅವರು ಮನೆಯಲ್ಲಿರುವುದು ಒಳ್ಳೆಯದು. ಈ ಬಗ್ಗೆ ತಮ್ಮಲ್ಲಿ ಮನವಿ ಮಾಡಿಕೊಳ್ತಿದ್ದೇನೆ. ಯುದ್ಧದ ಸ್ಥಿತಿ ನಿರ್ಮಾಣವಾಗಿದೆ.

ಈ ಭಾನುವಾರು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ತನಕ ಜನತಾ ಕರ್ಫ್ಯೂ ಮಾಡಿ. ಈ ಟೈಂನಲ್ಲಿ ನಾಗರೀಕರ್ಯಾರು ಮನೆಯಿಂದ ಹೊರ ಬರಬೇಡಿ. ಈ ಮೂಲಕ ಜನತಾ ಕರ್ಫ್ಯೂಗೆ ಸಹಕರಿಸಿ. ಮಾರ್ಚ್ 22ರಂದು ದೇಶದ ಜನ ಈ ಸಂಕಲ್ಪ ಮಾಡಿ. ಆವತ್ತು ಮಾಡುವ ಜನತಾ ಕರ್ಫ್ಯೂ ಪರಿಣಾಮ ನೋಡಿ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ತಿಳಿಯುತ್ತೆ. ಇದರ ಹೊಣೆಯನ್ನ ರಾಜ್ಯ ಸರ್ಕಾರ ನೋಡಿಕೊಳ್ಳಲಿ. ಈ ಬಗ್ಗೆ ಇತರೆ ಜನರಿಗೆ ತಿಳಿಸಿ. ಈ ಬಗ್ಗೆ ಶಪಥ ಮಾಡೋಣ.

ಕಳೆದ ಎರಡು ತಿಂಗಳಿಂದ ವೈದ್ಯರು, ನರ್ಸ್, ಏರ್ ಲೈನ್ಸ್, ಪೊಲೀಸ್ರು, ಸಾರ್ವಜನಿಕ ಸಂಚಾರ ಸೇವೆ ನೀಡ್ತಿರುವವರು, ಕಾರ್ಮಿಕರು, ಮಾಧ್ಯಮದವರು ಸೇರಿದಂತೆ ಅನೇಕರು ಇವರು ಇನ್ನೊಬ್ಬರಿಗೆ ಸಹಾಯ ಮಾಡುವ ಕೆಲಸ ಮಾಡ್ಲಿಲ್ಲ ಅಂದ್ರೆ, ಸಾಕಷ್ಟು ಸಮಸ್ಯೆಯಾಗ್ತಿತ್ತು. ಮಾರ್ಚ್ 22 ಭಾನುವಾರ ಜನತಾ ಕರ್ಫ್ಯೂ ಯಾರು ಮಾಡ್ತಾರೋ ಅವರಿಗೆ ಧನ್ಯವಾದಗಳು. ಅಂದು ಸಂಜೆ 5 ಗಂಟೆಗೆ ಮನೆ ಬಾಗಿಲು, ಕಿಟಕಿ, ಬಾಲ್ಕನಿ ಹತ್ತಿರ ನಿಂತು ನಮ್ಗೆ ಸೇವೆ ನೀಡಿದವರಿಗೆ ಚಪ್ಪಾಳೆ, ಶಿಳ್ಳೆ, ಜೈಕಾರ ಹಾಕುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದು ಹೇಳಿದ್ದಾರೆ.

ವಿತ್ ಸಚಿವರು ನೇತೃತ್ವದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಆರ್ಥಿಕ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೆ. ಇದು ಮಧ್ಯಮ, ಅತಿ ಮಧ್ಯಮ ಹಾಗೂ ಬಡವರಿಗೆ ಇದು ಸಹಾಯ ಮಾಡಲಿದೆ. ವ್ಯಾಪಾರಸ್ಥರಲ್ಲಿ ನಾನೊಂದು ಮನವಿ ಮಾಡಿಕೊಳ್ಳುತ್ತೇನೆ. ಇದ್ರಿಂದ ನಿಮ್ಗೆ ಆರ್ಥಿಕ ಸಮಸ್ಯೆಯಾಗ್ತಿದೆ. ಭಯ ಪಡ್ಬೇಡಿ. ಕೇಂದ್ರ, ರಾಜ್ಯ ಸರ್ಕಾರ ನಿಮ್ಮ ಜೊತೆಯಿದೆ. ಇನ್ನು ನಾಗರೀಕರು ಅಗತ್ಯ ವಸ್ತುಗಳನ್ನ ಸಂಗ್ರಹಿಸಿ ಇಟ್ಟುಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಇಡೀ ದೇಶದ ಜನತೆ ತಮ್ಮ ಜಾವಾಬ್ದಾರಿಯನ್ನ ನಿರ್ವಹಿಸ್ತಾರೆ ಎಂದು ನಾನು ನಂಬಿದ್ದೇನೆ. ಇದನ್ನು ಮಾಡಿದ್ರೆ ಮಾನವನಿಗೆ ಜಯ. ಭಾರತಕ್ಕೆ ಜಯ. ನವರಾತ್ರಿ ಬರ್ತಿದೆ. ಇದು ಶಕ್ತಿಯ ದಿನ. ಇಡೀ ದೇಶದ ಜನತೆಗೆ ಶಕ್ತಿ ನೀಡಲಿ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಮುಂದಿನ ಕಠಿಣ ದಿನಗಳನ್ನ ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!