ಪ್ರತಿ ಭಾರತೀಯನಿಗೂ ಕರೋನಾ ಲಸಿಕೆ: ಪ್ರಧಾನಿ

247

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರತಿಯೊಬ್ಬ ಭಾರತೀಯನಿಗೂ ಕರೋನಾ ಲಸಿಕೆ ನೀಡಲಾಗುವುದು. ಇದರಲ್ಲಿ ಯಾರೂ ಹಿಂದೆ ಉಳಿಯುವುದಿಲ್ಲ ಎನ್ನುವ ಭರವಸೆಯನ್ನ ನಾನು ನೀಡುತ್ತೇನೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ಲಸಿಕೆ ಸಿಕ್ಕ ಮೇಲೆ ಎಲ್ಲರಿಗೂ ನೀಡಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ. ಸಹಜವಾಗಿ ಆರಂಭದಲ್ಲಿ ದುರ್ಬಲ ವರ್ಗದವರಿಗೆ ಹಾಗೂ ಮುಂಚೂಣಿಯಲ್ಲಿರುವ ಕಾರ್ಮಿಕರನ್ನ ರಕ್ಷಿಸುವ ಕೆಲಸ ಮಾಡುವತ್ತ ಗಮನ ಹರಿಸಬೇಕಾಗುತ್ತೆ ಎಂದಿದ್ದಾರೆ.

ಲಸಿಕೆ ಆಡಳಿತದ ಸಲುವಾಗಿ ತಜ್ಞರ ತಂಡ ರಚಿಸಲಾಗಿದೆ. ಲಾಜಿಸ್ಟಿಕ್ಸ್ ನಲ್ಲಿ 28 ಸಾವರಿಕ್ಕೂ ಅಧಿಕ ಕೋಲ್ಡ್ ಚೈನ್ ಪಾಯಿಂಟ್ ಗಳಲ್ಲಿ ಕೋವಿಡ್ 19 ಲಸಿಕೆ ಸಂಗ್ರಹಿಸಿ ವಿತರಣೆ ಹಾಗೂ ಕೊನೆಯ ಹಂತದವರೆಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಪಿಎಂ ಮೋದಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಧ್ಯಮಗೋಷ್ಠಿಯಲ್ಲಿ ಮಾತ್ನಾಡಿ, ಬಿಹಾರ ಜನತೆಗೆ ಉಚಿತ ಕರೋನಾ ಲಸಿಕೆ ಕೊಡುತ್ತೇವೆ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ರು. ಬಿಹಾರ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಇದೀಗ ಪಿಎಂ ದೇಶದ ಜನರಿಗೆ ಭರವಸೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!