ವೇಶ್ಯಾವಾಟಿಕೆ ಅಪರಾಧವಲ್ಲವೆಂದ ಬಾಂಬೆ ಹೈಕೋರ್ಟ್

328

ಪ್ರಜಾಸ್ತ್ರ ಸುದ್ದಿ

ಮುಂಬೈ: ಕಾನೂನು ಪ್ರಕಾರ ವೇಶ್ಯಾವಾಟಿಕೆ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಅಲ್ದೇ ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನ ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಬಂಧಿತವಾಗಿರುವ ಮೂವರು ಮಹಿಳೆಯರನ್ನ ಬಿಡುಗಡೆ ಮಾಡುವಂತೆ ಸೂಚಿಸಿದೆ.

ಕಳೆದ ವರ್ಷ ಮಲಾಡ್ ಅನ್ನೋ ಅತಿಥಿ ಗೃಹದ ಮೇಲೆ ದಾಳಿ ಮಾಡಿದ ಪೊಲೀಸರು 20 ವರ್ಷದ ಮೂವರು ಮಹಿಳೆಯರು, ಓರ್ವ ಮಧ್ಯವರ್ತಿಯನ್ನ ಬಂಧಿಸಿದ್ರು. ವೇಶ್ಯಾವಾಟಿಕೆ ಹಾಗೂ ಅನೈತಿಕ ಚಟುವಟಿಕೆ ಅಡಿಯಲ್ಲಿ ಬಂಧಿಸಿದ್ರು. ಮಜಗಾಂವ್ ಮೆಟ್ರೊ ಪಾಲಿಟಿಯನ್ ಕೋರ್ಟ್ ಬಂಧನವನ್ನ ಎತ್ತಿ ಹಿಡಿದಿತ್ತು. ಇದನ್ನ ಪ್ರಶ್ನಿಸಿ ಮಹಿಳೆಯರು ಹೈಕೋರ್ಟ್ ಮಟ್ಟಿಲು ಏರಿದ್ರು.

ಈ ಸಂಬಂಧ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪೃಥ್ವಿರಾಜ ಚೌಹ್ಹಾಣ್ ಅವರ ನೇತೃತ್ವದ ಪೀಠ 1956ರ ಅನೈತಿಕ ಚಟುವಟಿಕೆ ಕಾಯ್ದೆಯಡಿಯಲ್ಲಿ ವೇಶ್ಯಾವಾಟಿಕೆ ಅಪರಾಧವೆಂದು ಹೇಳಿಲ್ಲವೆಂದು ತಿಳಿಸಿದೆ. ವ್ಯಾಪಾರದ ದೃಷ್ಟಿಯಿಂದ ವ್ಯಕ್ತಿಯನ್ನ ಲೈಂಗಿಕ ಶೋಷಣೆಗೆ ಒಳಪಡಿಸುವುದು, ಬೆದರಿಕೆ ಒಡುವುದು, ಇದನ್ನೇ ವೃತ್ತಿ ಮಾಡಿಕೊಳ್ಳುವುದು ಅಪರಾಧ. ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆ, ಬೇರೆಯೊಬ್ಬರನ್ನ ಪ್ರಚೋದನೆ ಪಡಿಸಿದ್ರೆ ಅದು ಅಪರಾಧ ಎನಿಸಿಕೊಂಡಿದೆ. ಅಲ್ದೇ, ಈ ಮೂವರು ಮಹಿಳೆಯರು ವೇಶ್ಯಾವಾಟಿಕೆ ನಡೆಸ್ತಿದ್ರು ಅನ್ನೋದಕ್ಕೆ ಯಾವುದೇ ಸಾಕ್ಷಿಯಿಲ್ಲ. ಹೀಗಾಗಿ ಅವರನ್ನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಬಾಂಬೆ ಹೈಕೋರ್ಟ್ ಆದೇಶಿಸಿದೆ.

ಈ ಆದೇಶದಿಂದ ವೇಶ್ಯಾವಾಟಿಕೆಯನ್ನ ಕಾನೂನುಬದ್ಧಗೊಳಿಸಬೇಕು ಅನ್ನೋ ಮಾತಿಗೆ ಮತ್ತಷ್ಟು ಬೆಂಬಲ ವ್ಯಕ್ತವಾಗಿದೆ. ಇದ್ರಿಂದ ಈ ವೃತ್ತಿ ಆಯ್ಕೆ ಮಾಡಿಕೊಂಡವರಿಗೆ ಶೋಷಣೆ ತಪ್ಪುತ್ತೆ. ಜೀವನದ ರಕ್ಷಣೆ ಬಗ್ಗೆ ಜಾಗೃತಿ ವಹಿಸಿಕೊಳ್ಳಬಹುದು ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!