ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳಿಗೆ ಚಟ್ನಳ್ಳಿಯಲ್ಲಿ ಸನ್ಮಾನ

391

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಿಯುಸಿಯಲ್ಲಿ ಉತ್ತಮ ಅಂಕಗಳನ್ನ ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದ, ತಾಲೂಕಿನ ಚಟ್ನಳ್ಳಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯ್ತು. ಗ್ರಾಮದ ಶ್ರೀಸಮರ್ಥ ಸದ್ಗುರು ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ವಿದ್ಯಾರ್ಥಿಗಳಿಗೆ ಗೌರವಿಸಲಾಯ್ತು.

ಶರಣಬಸು ಪೂಜಾರಿ(ಶೇ.95), ಅಂಕಿತಾ ಸಜ್ಜನ(ಶೇ.88), ಶ್ವೇತಾ ಹದ್ನೂರ(ಶೇ.86) ಹಾಗೂ ಅನಿತಾ ಬಿರಾದಾರ(ಶೇ.68) ಅನ್ನೋ ನಾಲ್ವರು ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಹೀಗಾಗಿ ಇವರನ್ನ ಸನ್ಮಾನಿಸಲಾಯ್ತು. ಈ ವೇಳೆ ಪುರಸಭೆ ಸದಸ್ಯ ಶರಣಗೌಡ ಪಾಟೀಲ, ಶಿಕ್ಷಕರಾದ ಲಕ್ಕಣ್ಣ ಬೀರಗೊಂಡ, ಬಸವರಾಜ ಸಜ್ಜನ, ಯಲ್ಲಪ್ಪ ಕುಂಟೋಜಿ, ಸಿದ್ದು ಹದ್ನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಬಸವಲಿಂಗ ಹದ್ನೂರ ನಿರೂಪಿಸಿ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!