ಪಂಜಾಬಿನಲ್ಲಿ 300 ಯುನಿಟ್ ವಿದ್ಯುತ್ ಉಚಿತ

201

ಪ್ರಜಾಸ್ತ್ರ ಸುದ್ದಿ

ಪಂಜಾಬಿನಲ್ಲಿ ಸರ್ಕಾರ ರಚನೆ ಮಾಡಿರುವ ಆಮ್ ಆದ್ಮಿ ಪಾರ್ಟಿ ಇದೀಗ ಅಲ್ಲಿನ ಜನರಿಗೆ ಬಿಗ್ ಗಿಫ್ಟ್ ನೀಡಿದೆ. ಗೃಹ ಬಳಕೆಗೆ 300 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಸಿಎಂ ಭಗವಂತ್ ಮಾನ್ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಮಾನ್ ಶನಿವಾರ ಈ ಘೋಷಣೆ ಮಾಡಿದ್ದು, ಜುಲೈ 1ರಿಂದ ಇದು ಜಾರಿಗೆ ಬರಲಿದೆ. ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮೊದಲು ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಪಂಜಾಬಿನ ವಿದ್ಯುತ್ ಸರಬರಾಜು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!